ಮದ್ದೂರು ತಾಲೂಕಿನ ನಿಲುವಾಗಿಲು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಬೈಸಿಕಲ್‌ಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು. ಪ್ರಪುಲ್ಲಾ, ರಾಜು, ಚೇತನ್, ರಾಜೀವ್, ರವೀಶ್, ರವಿಕುಮಾರ್, ರಾಧಾಕೃಷ್ಣ, ಎಂ.ಪಿ.ಮಹೇಶ್ ಇದ್ದರು. 
ಮಂಡ್ಯ

ವಿದ್ಯಾರ್ಥಿಗಳಿಗೆ ಉಚಿತವಾಗಿ ಸೈಕಲ್ ವಿತರಣೆ

ನಾಗೇಶ ಎಸ್
ಮದ್ದೂರು: ವಿದ್ಯಾರ್ಥಿಗಳು ಸರ್ಕಾರ ಮತ್ತು ದಾನಿಗಳು, ಸಂಘ, ಸಂಸ್ಥೆಗಳು ನೀಡುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದು ಸಮಾಜ ಸೇವಕ ಪ್ರಪುಲ್ಲಾ ತಿಳಿಸಿದರು.
ತಾಲೂಕಿನ ನಿಲುವಾಗಿಲು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಬುಧವಾರ ದಾನಿಗಳು ಕೊಡುಗೆ ನೀಡಿದ ಬೈಸಿಕಲ್‌ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದ ಅವರು, ಶಾಲೆಗಳಿಗೆ ದೂರದ ಊರುಗಳಿಂದ ವಿದ್ಯಾರ್ಥಿಗಳು ಆಗಮಿಸಲು ತೊಂದರೆಯಾಗುತ್ತಿದೆ ಎಂದು ಮುಖ್ಯಶಿಕ್ಷಕ ರವೀಶ್ ಅವರು ನಮಗೆ ತಿಳಿಸಿದ ಹಿನ್ನೆಲೆಯಲ್ಲಿ 11 ಸೈಕಲ್‌ಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಂಡು ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡು ಶಾಲೆಗೆ, ಶಿಕ್ಷಕರಿಗೆ ಹಾಗೂ ಪಾಲಕರಿಗೆ ಕೀರ್ತಿ ತರಬೇಕೆಂದು ಕಿವಿಮಾತು ಹೇಳಿದರು.
ದಾನಿಗಳಾದ ಪ್ರಪುಲ್ಲಾ, ರಾಜು, ಚೇತನ್, ರಾಜೀವ್, ಮುಖ್ಯ ಶಿಕ್ಷಕ ರವೀಶ್ ಸೈಕಲ್‌ಗಳನ್ನು ಕೊಡುಗೆ ನೀಡಿದರು. ಪಿಡಿಒ ರವಿಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ , ಶಿಕ್ಷಕರಾದ ಕನಕ ರತ್ನ, ಎಂ.ಪಿ. ಮಹೇಶ್, ಲಕ್ಷ್ಮೀಪತಿ, ಸುಕನ್ಯಾ, ಶೋಭಾ ಹಾಗೂ ಶುಭಶ್ರೀ ಇದ್ದರು.