ಹಲಗೂರು ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಿಸಲಾಯಿತು. ಎಚ್.ಎಂ.ಆನಂದ್ ಕುಮಾರ್, ಮೋಹನ್ ಕುಮಾರ್, ಎ.ಟಿ.ಶ್ರೀನಿವಾಸ್, ಸಿ.ಪ್ರವೀಣ್, ಜಿ.ಎಸ್.ಮನೋಹರ್, ಎಚ್.ಎಸ್. ಶ್ರೀನಿವಾಸಾಚಾರಿ, ಮುಖ್ಯ ಶಿಕ್ಷಕರಾದ ಎಚ್.ಶಿವರಾಮು, ಶಿಕ್ಷಕರಾದ ಕೆ.ಸಿ.ಸವಿತಾ, ಎಚ್.ಆರ್.ಕೃಷ್ಣ, ವಿಷಕಂಠ ಮೂರ್ತಿ, ಕೆ.ಆರ್.ನಿಷ್ಕಲ ಇತರರು ಇದ್ದರು.
ಹಲಗೂರು: ಇಲ್ಲಿನ ಮದ್ದೂರು ರಸ್ತೆಯಲ್ಲಿರುವ ಹಲಗೂರು ವಿದ್ಯಾಸಂಸ್ಥೆಯ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಹೆಲ್ತ್ ಟು ಎಜುಕೇಷನ್ ಫೌಂಡೇಷನ್ ಬೆಂಗಳೂರು ವತಿಯಿಂದ ಶನಿವಾರ ಉಚಿತ ಶಾಲಾ ಬ್ಯಾಗ್ ವಿತರಿಸಲಾಯಿತು.
ಹೆಲ್ತ್ ಟು ಎಜುಕೇಷನ್ ಫೌಂಡೇಷನ್ ಸಂಸ್ಥೆಯ ಅಧ್ಯಕ್ಷ ಎಚ್.ಎಂ.ಆನಂದ್ ಕುಮಾರ್ ಮಾತನಾಡಿ, ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್ ಹಾಗೂ ಲೇಖನಿ ಸಾಮಗ್ರಿಗಳನ್ನು ವಿತರಿಸಿದ್ದು, ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಹೆಲ್ತ್ ಟು ಎಜುಕೇಷನ್ ಫೌಂಡೇಷನ್ ಸಂಸ್ಥೆಯ ಮ್ಯಾನೇಜರ್ ಮೋಹನ್ ಕುಮಾರ್, ನಿರ್ದೇಶಕರಾದ ಎ.ಟಿ.ಶ್ರೀನಿವಾಸ್, ಸಿ.ಪ್ರವೀಣ್, ಜಿ.ಎಸ್.ಮನೋಹರ್, ಎಚ್.ಎಸ್. ಶ್ರೀನಿವಾಸಾಚಾರಿ, ಮುಖ್ಯ ಶಿಕ್ಷಕರಾದ ಎಚ್.ಶಿವರಾಮು, ಶಿಕ್ಷಕರಾದ ಕೆ.ಸಿ.ಸವಿತಾ, ಎಚ್.ಆರ್.ಕೃಷ್ಣ, ವಿಷಕಂಠ ಮೂರ್ತಿ, ಕೆ.ಆರ್.ನಿಷ್ಕಲ ಇತರರು ಇದ್ದರು.