ಮಂಡ್ಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಫೋಸ್ಟರ್ ಬಿಡುಗಡೆ ಮಾಡಲಾಯಿತು. 
ಮಂಡ್ಯ

ಫೆ.25ರಂದು ಕನ್ನಡ ಮೊದಲು ಆಟೋ ರ್ಯಾಲಿ: ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ ಮಾಹಿತಿ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ರ್ಯಾಲಿಯಲ್ಲಿ 50 ಆಟೋ ಹಾಗೂ ಒಂದು ತೆರೆದ ಜೀಪ್
  • ನಗರದಾದ್ಯಂತ ಸಂಚರಿಸಿ ಸಾರ್ವಜನಿಕರಿಗೆ ಜಾಗೃತಿ
ಮಂಡ್ಯ: ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆಯ ಉಳಿವಿಗಾಗಿ ಮತ್ತು ಕನ್ನಡ ಪರಂಪರೆಯ ಪೋಷಣೆಗಾಗಿ ಕನ್ನಡಪರ ಸಂಘಟನೆಗಳ ವತಿಯಿಂದ ಫೆ.25ರಂದು ಮಂಡ್ಯ ನಗರದಲ್ಲಿ ಕನ್ನಡ ಮೊದಲು ಆಟೋ ರ‌್ಯಾಲಿ ಆಯೋಜಿಸಲಾಗಿದೆ ಎಂದು ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ ತಿಳಿಸಿದರು.
ರ‌್ಯಾಲಿಯಲ್ಲಿ 50 ಆಟೋ ಹಾಗೂ ಒಂದು ತೆರೆದ ಜೀಪ್ ಮೂಲಕ ನಗರದಾದ್ಯಂತ ಸಂಚರಿಸಿ ಸಾರ್ವಜನಿಕರಲ್ಲಿ ಕನ್ನಡ ಉಳಿವಿಗಾಗಿ ಅರಿವು ಮೂಡಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ, ರಾಜೇಂದ್ರ ಬಾಬು, ಎಚ್.ಎಸ್.ಧನುಷ್‌ಗೌಡ, ವೆಂಕಟೇಶ್, ಸೋಮಶೇಖರ್ ಇದ್ದರು.