ಕಾಂಗ್ರೆಸ್ ಕಾರ್ಯಕರ್ತರು ಮತ್ತು ರಮೇಶ್ ಬಂಡಿಸಿದ್ದೇಗೌಡ ಅಭಿಮಾನಿ ಬಳಗದ ವತಿಯಿಂದ ಕೆ.ಆರ್.ಸಾಗರದಲ್ಲಿ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರ ಹುಟ್ಟು ಹಬ್ಬದ ಅಂಗವಾಗಿ ಆಟೋಚಾಲಕರಿಗೆ ಆಹಾರ ಕಿಟ್ ವಿತರಣೆ ಮಾಡಲಾಯಿತು. ಎಂ.ಬಿ.ಕುಮಾರ್, ವೆಂಕಟೇಶ್, ಜಗದೀಪ್ ಸಿಂಗ್, ಸುನೀಲ್ ಇದ್ದರು. 
ಮಂಡ್ಯ

ಆಟೋ ಚಾಲಕರಿಗೆ ಆಹಾರ ಕಿಟ್ ವಿತರಣೆ

ಲಲಾಟಾಕ್ಷ ಎಸ್
ಕೆ.ಆರ್.ಸಾಗರ: ಕೆ.ಆರ್.ಸಾಗರದಲ್ಲಿ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರ ಹುಟ್ಟು ಹಬ್ಬದ ಹಿನ್ನಲೆಯಲ್ಲಿ 70 ಆಟೋ ಚಾಲಕರಿಗೆ ಆಹಾರ ಕಿಟ್ ವಿತರಣೆ ಮಾಡಲಾಯಿತು.
ಕಾಂಗ್ರೆಸ್ ಕಾರ್ಯಕರ್ತರು ಮತ್ತು ರಮೇಶ್ ಬಂಡಿಸಿದ್ದೇಗೌಡ ಅಭಿಮಾನಿ ಬಳಗದ ವತಿಯಿಂದ ಕೆ.ಆರ್.ಸಾಗರದ ಅರಳಿಕಟ್ಟೆಯ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಿನ ನಿತ್ಯದ ಬಳಕಗೆ ಬೇಕಾದ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ಕೆ.ಆರ್.ಸಾಗರ ವ್ಯಾಪ್ತಿಯ ಆಟೋ ಚಾಲಕರಿಗೆ ನೀಡಲಾಯಿತು.
ಕೆ.ಆರ್.ಸಾಗರ ಗ್ರಾಪಂ ಮಾಜಿ ಅಧ್ಯಕ್ಷ ಎಂ.ಬಿ.ಕುಮಾರ್, ಗ್ರಾಪಂ ಮಾಜಿ ಸದಸ್ಯ ವೆಂಕಟೇಶ್, ಜಗದೀಪ್ ಸಿಂಗ್, ಸುನೀಲ್, ರವಿಕುಮಾರ್, ದೇವರಾಜು, ಮುಖಂಡರಾದ ಜಗದೀಶ್, ಶ್ರೀನಿವಾಸ್, ಸ್ವಾಮಣ್ಣ, ರವಿಚಂದ್ರ, ಸಂಜು ಇದ್ದರು.