ರಂಜಾನ್ ಅಂಗವಾಗಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಕೊಪ್ಪದ ಮುಸ್ಲಿಂ ಬಾಂಧವರಿಗೆ ನೀಡಿದ್ದ ಆಹಾರ ಕಿಟ್‌ಗಳನ್ನು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪರ್ವಿಜ್ ಪಾಷ ವಿತರಣೆ ಮಾಡಿದರು. ಎಗ್‌ಬಾಲ್, ಸಬೀರ್, ಮುಕ್ತರ್, ರಫೀಕ್, ಗುಲ್ಜಾರ್, ಹಬೀರ್ ಇದ್ದರು. 
ಮಂಡ್ಯ

ಮುಸ್ಲಿಮರಿಗೆ ಆಹಾರ ಕಿಟ್ ವಿತರಣೆ

ಮದ್ದೂರು: ರಂಜಾನ್ ಅಂಗವಾಗಿ ಕೊಪ್ಪದ ಮುಸ್ಲಿಂ ಬಾಂಧವರಿಗೆ ಸಚಿವ ಎನ್.ಚಲುವರಾಯಸ್ವಾಮಿ ಅವರು ಆಹಾರ ಕಿಟ್ ನೀಡಿರುವುದು ಮೆಚ್ಚುಗೆಯ ವಿಷಯ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪರ್ವಿಜ್ ಪಾಷ ಮೆಚ್ಚುಗೆ ವ್ಯಕ್ತಪಡಿಸಿದರು.
ಸಚಿವ ಎನ್.ಚಲುವರಾಯಸ್ವಾಮಿ ಅವರು ನೀಡಿದ್ದ ಆಹಾರ ಕಿಟ್‌ಗಳನ್ನು ಶುಕ್ರವಾರ ಮುಸ್ಲಿಂ ಬಾಂಧವರಿಗೆ ವಿತರಿಸಿ ಮಾತನಾಡಿ, ಅದೇ ರೀತಿ ರಂಜಾನ್ ಅಂಗವಾಗಿ ಕೊಪ್ಪದ ಮುಸ್ಲಿಂ ಕುಟುಂಬಗಳಿಗೆ ಆಹಾರ ಕಿಟ್ ನೀಡುವ ಮೂಲಕ ಹಬ್ಬ ಮಾಡಲು ಅನುಕೂಲ ಕಲ್ಪಿಸಿದ್ದಾರೆ. ಮುಂದೆಯೂ ಇದೇ ರೀತಿ ಸಚಿವರು ಮುಸ್ಲಿಂ ಬಾಂಧವರಿಗೆ ಅನುಕೂಲ ಕಲ್ಪಿಸಲಿ ಎಂದರು.
ಮನ್‌ಮಲ್ ಮಾಜಿ ನಿರ್ದೇಶಕ ಕುಮಾರ್ ಕೊಪ್ಪ, ಮುಖಂಡರಾದ ಎಗ್‌ಬಾಲ್, ಸಬೀರ್, ಮುಕ್ತಾರ, ರಫೀಕ್, ಗುಲ್ಜಾರ್, ಹಬೀರ್, ರುದ್ರೇಶ್ ಇತರರು ಇದ್ದರು.