ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರ 60ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಶ್ರೀ ಮಾತೃಭೂಮಿ ವೃದ್ಧಾಶ್ರಮದ ವೃದ್ಧರಿಗೆ ಅನ್ನಸಂತರ್ಪಣೆ ಮಾಡಲಾಯಿತು.
ಕೆ.ಆರ್.ಪೇಟೆ: ಕರವೇ ಮಂಡ್ಯ ಜಿಲ್ಲಾಧ್ಯಕ್ಷ ಹೊನ್ನೇನಹಳ್ಳಿ ವೇಣು ಹಾಗೂ ಕೆ.ಆರ್.ಪೇಟೆ ಕರವೇ ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಶ್ರೀನಿವಾಸ್ ನೇತೃತ್ವದಲ್ಲಿ ಕೆ.ಆರ್.ಪೇಟೆ ಪಟ್ಟಣದಲ್ಲಿರುವ ಶ್ರೀ ಮಾತೃಭೂಮಿ ವೃದ್ಧಾಶ್ರಮದಲ್ಲಿ ವೃದ್ಧರಿಗೆ ಅನ್ನಸಂತರ್ಪಣೆ ಹಾಗೂ ವೃದ್ಧಾಶ್ರಮದ ಆವರಣದಲ್ಲಿ ಸಸಿ ನೆಡುವ ಮೂಲಕ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರ 60ನೇ ವರ್ಷದ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮಂಡ್ಯ ಜಿಲ್ಲಾ ಅಧ್ಯಕ್ಷ ವೇಣು ಮಾತನಾಡಿ, ನಮ್ಮ ರಾಜ್ಯ ಅಧ್ಯಕ್ಷ ಕೆಚ್ಚೆದೆಯ ಟಿ.ಎ.ನಾರಾಯಣಗೌಡ ಕನ್ನಡ ಮತ್ತು ಕನ್ನಡಿಗರ ಹೋರಾಟದ ಸಂಕೇತ. ನೆಲ, ಜಲ, ಭಾಷೆಗಾಗಿ ಹೋರಾಡುತ್ತಿದ್ದಾರೆ. ಅವರ ಜನ್ಮದಿನವನ್ನು ಸೇವೆಯೊಂದಿಗೆ ಆಚರಿಸುವುದು ಕರವೇ ಕಾರ್ಯಕರ್ತರಿಗೆ ಹೆಮ್ಮೆ. ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು ಎಂಬ ಧ್ಯೇಯವಾಕ್ಯದೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆಯನ್ನು ಮುನ್ನಡೆಸುತ್ತಾ ರಾಜ್ಯದ ಜೀವನಾಡಿ ಕಾವೇರಿ ನದಿ ನೀರಿನ ವಿವಾದ, ಬೆಳಗಾವಿ ಗಡಿ ವಿವಾದ ಮತ್ತು ಕನ್ನಡ ನಾಮಫಲಕಗಳ ಕಡ್ಡಾಯ ಅಳವಡಿಕೆ ಸೇರಿದಂತೆ ಅನೇಕ ಹೋರಾಟಗಳಲ್ಲಿ ಗೆಲುವು ತಂದುಕೊಟ್ಟಿದ್ದಾರೆ ಎಂದರು.
ತಾಲೂಕು ಅಧ್ಯಕ್ಷ ಅಗ್ರಹಾರ ಬಾಚಹಳ್ಳಿ ಶ್ರೀನಿವಾಸ್, ಕರವೇ ಹಿರಿಯ ಮುಖಂಡ ಸಾಸಲು ಗುರುಮೂರ್ತಿ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಚಿಕ್ಕೋನಹಳ್ಳಿ ಚೇತನ್, ಜಿಲ್ಲಾ ಉಪಾಧ್ಯಕ್ಷ ಶಿವಪ್ರಸಾದ್, ಯುವ ಘಟಕ ಅಧ್ಯಕ್ಷ ಆನಂದ್, ಕಾರ್ಯದರ್ಶಿ ಮನು, ಸಂಘಟನಾ ಕಾರ್ಯದರ್ಶಿ ಸ್ವಾಮಿ, ವೃದ್ಧಾಶ್ರಮದ ನಿರ್ವಾಹಕ ನಾಗಣ್ಣ, ಕರವೇ ಸದಸ್ಯರಾದ ಝೆಹಿದ್ ಅಹಮ್ಮದ್, ಹೊಸಹೊಳಲು ಗೋಪಿ, ಕೊಮ್ಮೆನಹಳ್ಳಿ ಅನಿಲ್, ಸುನಿಲ್, ಕೈಗೊನಹಳ್ಳಿ ಪಾಂಡು, ಅಭಿಷೇಕ, ಪುನೀತ್, ಹರಿನಹಳ್ಳಿ ಲೋಕೇಶ್, ನಾಝಿರ್, ಬೋರೇಗೌಡ, ಶಿವಲಿಂಗ ಶಿವಕುಮಾರ್, ರವೀಂದ್ರಗೌಡ, ಶ್ರೀನಿವಾಸ್ ಇತರರು ಇದ್ದರು.