ಕಿಕ್ಕೇರಿ ಸಮೀಪದ ಮಾಕವಳ್ಳಿಯಲ್ಲಿ ಇತ್ತೀಚೆಗೆ ಡಾ. ಬಿ.ಆರ್. ಅಂಬೇಡ್ಕರ್ ಸ್ತ್ರೀ ಸಂಘ ಇತ್ತೀಚೆಗೆ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಸ್ತ್ರೀ ಶಕ್ತಿ ಸಂಘದ ನಾಮಫಲಕ ಉದ್ಘಾಟನೆ ಸಮಾರಂಭದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನವನ್ನು ಗಣ್ಯರು ಅರ್ಪಿಸಿದರು. ಆರ್‌ಟಿಒ ಮಲ್ಲಿಕಾರ್ಜುನ, ಡಿ.ಪ್ರೇಮ್‌ಕುಮಾರ್, ಯೋಗೇಶ್, ನರಸಿಂಹಮೂರ್ತಿ ಮತ್ತಿತರರಿದ್ದರು.
ಕಿಕ್ಕೇರಿ: ಭಾರತದ ಪ್ರತಿಯೊಬ್ಬ ಪ್ರಜೆ ಸಮಾನ ಹಕ್ಕಿಗಾಗಿ ಶ್ರಮಿಸಿದ ಅಂಬೇಡ್ಕರ್ ಸ್ಮರಿಸಿ ಸರ್ವಜಾತಿಯ ಮಹಾನ್ ಶಕ್ತಿ ಎಂದು ಅರಿಯಬೇಕು ಎಂದು ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ್ ತಿಳಿಸಿದರು.
ಸಮೀಪದ ಮಾಕವಳ್ಳಿ ಗ್ರಾಮದಲ್ಲಿ ಕರ್ನಾಟಕ ಸಂವಿಧಾನ ಸೇನೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸ್ತ್ರೀ ಸಂಘ ಇತ್ತೀಚೆಗೆ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಸ್ತ್ರೀಶಕ್ತಿ ಸಂಘದ ನಾಮಫಲಕ ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಇಡೀ ರಾಷ್ಟ್ರದ ಆಸ್ತಿ. ಅವರ ಸಿದ್ಧಾಂತಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ. ಸಂವಿಧಾನದ ಮೂಲಕ ಎಲ್ಲರಿಗೂ ಸಮಾನ ಹಕ್ಕುಗಳನ್ನು ದೊರಕಿಸಿಕೊಟ್ಟ ಮಹಾನ್ ಮಾನವತಾವಾದಿ. ಮೀಸಲಾತಿ ಎನ್ನುವುದು ಸರ್ವರೂ ಸಮನಾಗಿ ಬದುಕಲು ರೂಪಿಸಿದ ಸಂವಿಧಾನದ ಹಕ್ಕಾಗಿದೆ. ಇಡೀ ವಿಶ್ವವೇ ಮೆಚ್ಚುವ ಪ್ರಜಾಪ್ರಭುತ್ವ ರಾಷ್ಟ್ರದ ಸಂವಿಧಾನ ನಮ್ಮದಾಗಿದ್ದು, ಸಂವಿಧಾನದ ಪಿತಾಮಹ ಬಾಬಾ ಸಾಹೇಬ್ ಅವರ ಆಶಯದಂತೆ ಬದುಕುವುದನ್ನು ಕಲಿಯಬೇಕಿದೆ ಎಂದರು.
ಕೆ.ಆರ್.ಪೇಟೆ ಪುರಸಭಾ ಸದಸ್ಯ ಡಿ.ಪ್ರೇಮ್‌ಕುಮಾರ್ ಮಾತನಾಡಿ, ಜಾತ್ಯತೀತ ಚಿಂತನೆಯ ಈ ದೇಶದಲ್ಲಿ ದಲಿತರ ಸ್ಥಿತಿ ಇಂದಿಗೂ ಉತ್ತಮವಾಗಿಲ್ಲ. ಶೋಷಣೆ ಮುಕ್ತ ಸಮಾಜ ನಿರ್ಮಾಣವಾಗಬೇಕಿದೆ. ಆಡಳಿತದಲ್ಲಿನ ಸಾಕಷ್ಟು ಲೋಪಗಳಿಂದ ದಲಿತರ ಏಳಿಗೆ ಸಾಧ್ಯವಾಗದಾಗಿದೆ. ದಲಿತರ ಶೋಷಣೆ ತಪ್ಪಬೇಕಿದೆ. ದಲಿತರ ರಕ್ಷಣೆಗೆ ಶಿಕ್ಷಣವನ್ನು ಅಸ್ತ್ರವಾಗಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗೌರವ: ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಚ್.ಆರ್.ಯೋಗೇಶ್, ಎಚ್.ಎಸ್.ನರಸಿಂಹಮೂರ್ತಿ, ಉಪನ್ಯಾಸಕ ಕರುಣಾನಿಧಿ, ಗ್ರಾಪಂ ಮಾಜಿ ಅಧ್ಯಕ್ಷ ಲಲಿತಮ್ಮ ಸಣ್ಣಯ್ಯ, ಬಲರಾಮೇಗೌಡ, ಮಂಜೇಗೌಡ, ಮಾಜಿ ಸದಸ್ಯ ಎಂ.ಆರ್.ಮಂಜುನಾಥ್, ಡೇರಿ ಅಧ್ಯಕ್ಷ ರವಿ, ಪಟೇಲ್ ಯೋಗೇಶ್, ರೈತ ಸಂಘದ ರವಿ, ಕುಮಾರ್, ಸುರೇಶ, ಚಂದ್ರು, ಲೋಕೇಶ್, ಶ್ರೀಧರ್, ರಾಮೇಗೌಡ, ಚಲುವಯ್ಯ, ಜವರಯ್ಯ, ಜಾಣಯ್ಯ, ಸಣ್ಣಯ್ಯ, ಗಂಗಾಧರ್, ಗುರುರಂಗ, ಗೋಪಾಲಕೃಷ್ಣ ಮತ್ತಿತರರಿದ್ದರು.