ಶ್ರೀರಂಗಪಟ್ಟಣದ ಬೆಂಗಳೂರು-ಮೈಸೂರು ಹಳೆಯ ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಲ್ಲಿ ರೈತ ಸಂಘಟನೆ ಕಾರ್ಯಕರ್ಥರು ಪ್ರತಿಭಟನೆ ನಡೆಸಿದರು.
ಶ್ರೀರಂಗಪಟ್ಟಣ: ಪಟ್ಟಣದ ಬೆಂಗಳೂರು-ಮೈಸೂರು ಹಳೆಯ ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಲ್ಲಿ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ರೈತ ಸಂಘದ ಅಧ್ಯಕ್ಷ ಶಂಭುಗೌಡ ಮಾತನಾಡಿ, ಈ ಬಾರಿ ಸರಿಯಾಗಿ ಮಳೆ ಇಲ್ಲದೆ ಕನ್ನಂಬಾಡಿ ಜಲಾಶಯ ಭರ್ತಿಯಾಗಿಲ್ಲ. ಕಾವೇರಿ ಕಣಿವೆಯ ರೈತರು ಸಂಕಷ್ಟದಲ್ಲಿದ್ದಾರೆ. ಸಿಡಬ್ಲುೃಆರ್‌ಸಿ ಆದೇಶ ಸರಿಯಲ್ಲ ಎಂದರು.
ರೈತ ಮುಖಂಡ ಮರಳಗಾಲ ಕೃಷ್ಣೇಗೌಡ ಮಾತನಾಡಿ, ರಾಜ್ಯ ಸರ್ಕಾರದ ವೈಫಲ್ಯವೇ ಸಮಸ್ಯೆಗೆ ಕಾರಣವಾಗಿದೆ. ಸಮಿತಿ ಎದುರು ಸರಿಯಾದ ವಾದ ಮಂಡಿಸದಿರುವುದು ಈ ಆದೇಶ ಬರಲು ಕಾರಣವಾಗಿದೆ. ಒಂದು ವೇಳೆ ನೀರು ಬಿಡಲು ಸರ್ಕಾರ ಮುಂದಾದರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ಕಡತನಾಳು ಬಾಲಕೃಷ್ಣ, ಮರಳಗಾಲ ಕೃಷ್ಣೇಗೌಡ, ಪಾಂಡು, ದೊಡ್ಡಪಾಳ್ಯ ಜಯರಾಮೇಗೌಡ, ಬಿ.ಎಸ್.ರಮೇಶ್, ಡಿ.ಎಂ.ಕೃಷ್ಣೇಗೌಡ, ಸಬ್ಬನಕುಪ್ಪೆ ಮಧು, ಕೂಡಲಕುಪ್ಪೆ ನಾಗರಾಜು, ಚಂದಗಾಲು ಶಂಕರ್, ಸಿ.ಸ್ವಾಮಿಗೌಡ, ಪ್ರಿಯ ರಮೇಶ್ ಭಾಗವಹಿಸಿದ್ದರು.