ಕೆ.ಎಂ.ದೊಡ್ಡಿ ಸಮೀಪದ ಮಾದರಹಳ್ಳಿ ಗ್ರಾಮದಲ್ಲಿ ರೈತರಿಗೆ ಹಿಪ್ಪುನೇರಳೆ ಬೆಳೆಗಳ ಕುರಿತ ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುಂದರ್‌ರಾಜ್, ವಿಜ್ಞಾನಿ ಡಾ.ಶಿವಕುಮಾರ್, ರೇಷ್ಮೆ ವಿಸ್ತರಣಾಧಿಕಾರಿ ಎಚ್.ಸಿ.ಸಿದ್ದರಮೇಶ್, ಪ್ರಶಾಂತ್‌ಕುಮಾರ್, ಯು.ಎಸ್.ಕೃಷ್ಣ, ಚನ್ನಶೇಖರ ಇದ್ದರು. 
ಮಂಡ್ಯ

ಹಿಪ್ಪುನೇರಳೆ ಬೆಳೆಗೆ ಫಲವತ್ತಾದ ಮಣ್ಣು ಅವಶ್ಯ

ಕಿರಣ್ ಗೌಡ.ಜಿ

ಪ್ರಮುಖ ಮುಖ್ಯಾಂಶಗಳು

  • ಜಿಪಂ ರೇಷ್ಮೆ ಉಪ ನಿರ್ದೇಶಕ ಡಾ.ಎಸ್.ಸುಂದರ್‌ರಾಜ್ ಅಭಿಪ್ರಾಯ
ಕೆ.ಎಂ.ದೊಡ್ಡಿ: ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಹಿಪ್ಪುನೇರಳೆ ಬೆಳೆಯನ್ನು ಉತ್ಕೃಷ್ಟ ರೀತಿಯಲ್ಲಿ ಬೆಳೆಯುವಂತೆ ಜಿಪಂ ರೇಷ್ಮೆ ಉಪ ನಿರ್ದೇಶಕ ಡಾ.ಎಸ್.ಸುಂದರ್‌ರಾಜ್ ಸಲಹೆ ನೀಡಿದರು.
ಸಮೀಪದ ಮಾದರಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಹಿಪ್ಪುನೇರಳೆ ಬೆಳೆಗಳ ಕುರಿತ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿಪ್ಪುನೇರಳೆ ಬೆಳೆಗೆ ಫಲವತ್ತಾದ ಮಣ್ಣು ಅವಶ್ಯ. ಆಧುನಿಕ ಪದ್ಧತಿ ಅಳವಡಿಸಿಕೊಂಡರೆ ನೀರಾವರಿ ಮತ್ತು ಮಳೆಯಾಶ್ರಿತ ಪ್ರದೇಶದಲ್ಲೂ ಹೆಚ್ಚು ಫಸಲು ಪಡೆಯಬಹುದು. ತೋಟದಲ್ಲಿ ಜೋಡಿ ಸಾಲು ಪದ್ಧತಿಯನ್ನು ಅಳವಡಿಸಿಕೊಂಡು ಕಾಲ ಕಾಲಕ್ಕೆ ಔಷಧಗಳನ್ನು ಸಿಂಪಡಿಸಬೇಕು. ಬೆಳೆಗೆ ಉತ್ತಮ ಗಾಳಿ ಮತ್ತು ಬೆಳಕು ಸಂಚಾರವಾದಾಗ ಫಸಲು ಉತ್ಕೃಷ್ಟವಾಗಿ ಬರುತ್ತದೆ ಎಂದು ಹೇಳಿದರು.
ವಿಜ್ಞಾನಿ ಡಾ.ಶಿವಕುಮಾರ್, ಕೆ.ಎಂ ದೊಡ್ಡಿ ತಾಂತ್ರಿಕ ಸೇವಾ ಕೇಂದ್ರದ ರೇಷ್ಮ ವಿಸ್ತರಣಾಧಿಕಾರಿ ಎಚ್.ಸಿ.ಸಿದ್ದರಮೇಶ್, ಕೊಪ್ಪ ತಾಂತ್ರಿಕ ಸೇವಾ ಕೇಂದ್ರ ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ಪ್ರಶಾಂತ್‌ಕುಮಾರ್, ರೇಷ್ಮೆ ನಿರೀಕ್ಷಕ ಯು.ಎಸ್.ಕೃಷ್ಣ ಮತ್ತು ಪ್ರಗತಿಪರ ರೇಷ್ಮೆ ಬೆಳೆಗಾರ ಚನ್ನಶೇಖರ ಮತ್ತು ಗ್ರಾಮದ ರೇಷ್ಮೆ ಬೆಳೆಗಾರರು ಉಪಸ್ಥಿತರಿದ್ದರು