ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯ ಮುಖ್ಯ ಗ್ರಂಥಪಾಲಕ ಡಾ.ಕೆ.ಅನಂತನಾಗ್ ಅವರಿಗೆ ಫೆಲೋಶಿಪ್ ಪ್ರಶಸ್ತಿ ಪ್ರದಾನ ಮಾಡಲಾಯಿತು.  
ಮಂಡ್ಯ

ಡಾ.ಕೆ.ಅನಂತನಾಗ್‌ಗೆ ಫೆಲೋಶಿಪ್ ಪ್ರಶಸ್ತಿ: ವಿಯಟ್ನಾಂನಲ್ಲಿ ನಡೆದ ವೈಜ್ಞಾನಿಕ ಸಮ್ಮೇಳನದಲ್ಲಿ ಪ್ರದಾನ

ಪ್ರಮುಖ ಮುಖ್ಯಾಂಶಗಳು

  • ಸುಮಾರು 20 ವರ್ಷದಿಂದ ಮಿಮ್ಸ್ ಸಂಸ್ಥೆಯಲ್ಲಿ ಮುಖ್ಯಗ್ರಂಥಪಾಲಕರಾಗಿ ಸೇವೆ
  • ವಿದ್ಯಾರ್ಥಿಗಳ ಅಭ್ಯಾಸಕ್ಕೆ ಅವಶ್ಯಕವಾಗಿರುವ ಪುಸ್ತಕ ಸಾಮಗ್ರಿ ಒದಗಿಸುವಂತಹ ವ್ಯಕ್ತಿತ್ವ
ಮಂಡ್ಯ: ವಿಯಟ್ನಾಂ ದೇಶದಲ್ಲಿ ಜರುಗಿದ ಅಂತಾರಾಷ್ಟ್ರೀಯ ವೈಜ್ಞಾನಿಕ ಸಮ್ಮೇಳನದಲ್ಲಿ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯ ಮುಖ್ಯ ಗ್ರಂಥಪಾಲಕ ಡಾ.ಕೆ.ಅನಂತನಾಗ್ ಅವರಿಗೆ ಪ್ರತಿಷ್ಠಿತ ಸೈಂಟಿಫಿಕ್ ಸಮಿಟ್ ಫೆಲೋಶಿಪ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಮಂಡ್ಯ ನಗರದ ಕೃಷ್ಣೇಗೌಡ ಹಾಗೂ ನೀಲಮ್ಮ ದಂಪತಿಯ ಸುಪುತ್ರ ಡಾ.ಕೆ.ಅನಂತನಾಗ್ ಅವರು ಸುಮಾರು 20 ವರ್ಷದಿಂದ ಮಿಮ್ಸ್ ಸಂಸ್ಥೆಯಲ್ಲಿ ಮುಖ್ಯಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿಗಳ ಅಭ್ಯಾಸಕ್ಕೆ ಅವಶ್ಯಕವಾಗಿರುವ ಪುಸ್ತಕ ಸಾಮಗ್ರಿಗಳನ್ನು ಹಾಗೂ ಹಲವಾರು ಬಡ ವಿದ್ಯಾರ್ಥಿಗಳ ವ್ಯಾಸಂಗ ಶುಲ್ಕಗಳನ್ನು ತಮ್ಮ ಕೈಲಾದಷ್ಟು ಸಹಾಯ ಮಾಡುವಲ್ಲಿ ಸಮಾಜ ಮುಖಿ ಕೆಲಸ ಮಾಡಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಕರ್ನಾಟಕ ವೈಜ್ಞಾನಿಕ ಸಂಶೋದನಾ ಪರಿಷತ್ ಇಂಡೋ-ವಿಯಟ್ನಾಂ ದೇಶದಲ್ಲಿ ಅಂತಾರಾಷ್ಟ್ರೀಯ ವೈಜ್ಞಾನಿಕ ಸಮ್ಮೇಳನದಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಮಿಮ್ಸ್‌ನಲ್ಲಿ ಫೆಬ್ರವರಿ ತಿಂಗಳಿನಲ್ಲಿ ಅತೀ ವಿಜೃಂಬಣೆಯಿಂದ ಜರುಗಿದ ರಾಷ್ಟ್ರಮಟ್ಟದ ಗ್ರಂಥಪಾಲಕರುಗಳ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂಬುದು ಗಮನಾರ್ಹ. ಡಾ.ಕೆ.ಅನಂತನಾಗ್ ಅವರನ್ನು ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ ಚಿಕ್ಕರಸಿನಕೆರೆ ಅಭಿನಂದಿಸಿದ್ದಾರೆ.
ವಿಯಟ್ನಾಂ ದೇಶದ ರಾಯಭಾರಿ ಹಾಗೂ ಐಪಿಎಸ್ ಅಧಿಕಾರಿ ಪ್ರದೀಪ್‌ಕುಮಾರ್, ಪರಿಷತ್ ರಾಜ್ಯಾಧ್ಯಕ್ಷ ಹುಲಿಕಲ್ ನಟರಾಜ್, ಶಾಂತವೀರ ಗುರು ಮುರುಗರಾಜೇಂದ್ರ ಸ್ವಾಮೀಜಿ, ಶಿವಬಸವ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಶರಣ ಚಿಂತಕ ವಿಶ್ವರಾಧ್ಯ ಸತ್ಯಂ ಪೇಟೆ, ಉದ್ಯಮಿ ದಿನೇಶ್‌ಕುಮಾರ್ ಜೈನ್, ಸಮಾಜ ಸೇವಕ ಅಜೀತ್ ಅಹಮದ್ ಸೇನಾ, ಸುರೇಶ್ ಇತರರಿದ್ದರು.