ಮಳವಳ್ಳಿ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಮನ್ ಕೀ ಬಾತ್ ನೇರ ಪ್ರಸಾರ ಕಾರ್ಯಕ್ರಮದ ಬಳಿಕ ಮಧು ಗಂಗಾಧರ್ ಮಾತನಾಡಿದರು. ಎಚ್.ಆರ್.ಅಶೋಕ್ ಕುಮಾರ್, ಅಶೋಕ್ ಜಯರಾಂ, ಯಮದೂರು ಸಿದ್ಧರಾಜು, ರಾಮಣ್ಣ, ಬಸವರಾಜು, ಶಿವಲಿಂಗಸ್ವಾಮಿ, ಜವರೇಗೌಡ, ಕೃಷ್ಣ, ಆನಂದ್, ಬಸವರಾಜು, ಶಿವಣ್ಣ, ಮಹೇಶ್ ಇದ್ದರು. 
ಮಂಡ್ಯ

ಬಿಜೆಪಿ ಅವಧಿಯಲ್ಲಿ ರೈತರ ಪರ ಯೋಜನೆಗಳ ಅನುಷ್ಠಾನ

ಲಲಾಟಾಕ್ಷ ಎಸ್
ಮಳವಳ್ಳಿ: ಕೇಂದ್ರದಲ್ಲಿ ಆಡಳಿತ ನಡೆಸಿರುವ ಸರ್ಕಾರಗಳಲ್ಲಿ ರೈತರ ಪರ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿರುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಾತ್ರ ಎಂದು ಬಿಜೆಪಿ ರಾಜ್ಯ ಪ್ರಕೋಷ್ಠ ಸದಸ್ಯ ಮಧು ಗಂಗಾಧರ್ ತಿಳಿಸಿದರು.
ತಾಲೂಕಿನ ಹೊಸಹಳ್ಳಿ ಗ್ರಾಮದ ಸಿದ್ಧಮಲ್ಲೇಶ್ವರ ಪಟ್ಟದ ಮಠದ ಆವರಣದಲ್ಲಿ ಭಾನುವಾರ ಬಿಜೆಪಿ ರೈತ ಮೋರ್ಚಾ ವತಿಯಿಂದ ಆಯೋಜಿಸಿದ್ದ 129ನೇ ಮನ್ ಕೀ ಬಾತ್ ವೀಕ್ಷಣೆ ಕಾರ್ಯಕ್ರಮದ ಬಳಿಕ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೇಶದ ಜನರನ್ನು ಉದ್ದೇಶಿಸಿ ಮನ್ ಕೀ ಬಾತ್ ನಲ್ಲಿ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ನಡೆಸುತ್ತಿದ್ದು, ದೇಶದಲ್ಲಿ ಎಲ್ಲ ನಾಗರಿಕರು ಬ್ಯಾಂಕ್ ವ್ಯವಹಾರ ನಡೆಸಬೇಕು ಎಂದು ಖಾತೆ ತೆರೆಸಿದ್ದಾರೆ. ರೈತರಿಗೆ ವಾರ್ಷಿಕ ಮೂರು ಕಂತುಗಳಲ್ಲಿ 6 ಸಾವಿರ ರೂ.ಗಳನ್ನು ಕೃಷಿ ಚಟುವಟಿಕೆಗೆ ನೀಡುತ್ತಿದ್ದಾರೆ. ಬಡಜನರು ಔಷಧ ಕೊಳ್ಳಲು ಅನುಕೂಲವಾಗಲೆಂದು ರಿಯಾಯಿತಿ ದರದಲ್ಲಿ ಜನೌಷಧ ಕೇಂದ್ರ ತೆರೆಯಲಾಗಿದೆ. ಸ್ಥಳೀಯರು ಸೇರಿದಂತೆ ಸುತ್ತಲ ಗ್ರಾಮಸ್ಥರು ವೀಕ್ಷಿಸಿದರು. ರೈತ ಮೋರ್ಚಾ ವತಿಯಿಂದ ಮಾಜಿ ಸೈನಿಕ ಸೇರಿದಂತೆ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು.
ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಎಚ್.ಆರ್.ಅಶೋಕ್ ಕುಮಾರ್, ಜಿಲ್ಲಾಧ್ಯಕ್ಷ ಅಶೋಕ್ ಜಯರಾಂ, ಉಪಾಧ್ಯಕ್ಷ ಯಮದೂರು ಸಿದ್ಧರಾಜು, ರಾಮಣ್ಣ, ಖಜಾಂಚಿ ಬಸವರಾಜು, ಮಾಧ್ಯಮ ವಕ್ತಾರ ಶಿವಲಿಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಜವರೇಗೌಡ, ತಾಲೂಕು ಅಧ್ಯಕ್ಷ ಕೃಷ್ಣ, ಪ್ರಧಾನ ಕಾರ್ಯದರ್ಶಿ ಆನಂದ್, ಮುಖಂಡರಾದ ವಕ್ಕರಹಳ್ಳಿ ಬಸವರಾಜು, ಹಳದಾಸನಹಳ್ಳಿ ಶಿವಣ್ಣ, ತೆಂಕಹಳ್ಳಿ ಮಹೇಶ್ ಇತರರಿದ್ದರು.