ವಿದ್ಯುತ್ ಶಾಕ್‌ 
ಮಂಡ್ಯ

ವಿದ್ಯುತ್ ತಗುಲಿ ರೈತ ಸಾವು

ರವಿಕುಮಾರ್ ಪಿ. ಕೆ
ಮದ್ದೂರು: ತಾಲೂಕಿನ ಕೊಪ್ಪ ಹೋಬಳಿ ಅಂಕುಶಾಪುರ ಗ್ರಾಮದಲ್ಲಿ ಬುಧವಾರ ಸಂಜೆ ಕೃಷಿ ಕೆಲಸದಲ್ಲಿ ತೊಡಗಿದ್ದ ರೈತರೊಬ್ಬರು ವಿದ್ಯುತ್ ಶಾಕ್‌ನಿಂದ ಮೃತಪಟ್ಟಿದ್ದಾರೆ.
ಗ್ರಾಮದ ರುದ್ರೇಗೌಡ (65) ಮೃತಪಟ್ಟ ರೈತ. ಬುಧವಾರ ಸಂಜೆ ತಮ್ಮ ಜಮೀನಿಗೆ ನೀರು ಹಾಯಿಸಲು ಹೋಗಿದ್ದಾಗ ಬೋರ್ವೆಲ್ ಪ್ಯಾನಲ್ ಬೋರ್ಡ್‌ನಿಂದ ಇದಕ್ಕಿದ್ದಂತೆ ವಿದ್ಯುತ್ ತಗುಲಿ ರುದ್ರೇಗೌಡ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಮೃತನ ಪುತ್ರ ಅರುಣ್ ಕುಮಾರ್ ನೀಡಿದ ದೂರಿನ ಅನ್ವಯ ಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.