ಮಂಡ್ಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್ ಮಾತನಾಡಿದರು.  
ಮಂಡ್ಯ

ಫೆ.28ರಿಂದ ಕಚ್ಚೀಗೆರೆಯಲ್ಲಿ ಜಾತ್ರಾ ಮಹೋತ್ಸವ: ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್ ಮಾಹಿತಿ

ಪ್ರಮುಖ ಮುಖ್ಯಾಂಶಗಳು

  • ಶನೇಶ್ಚರಸ್ವಾಮಿ ದೇವಸ್ಥಾನದ 41ನೇ ವರ್ಷದ ಜಾತ್ರಾ ಮಹೋತ್ಸವ
  • ಹಲವು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ
ಮಂಡ್ಯ: ತಾಲೂಕಿನ ಕಚ್ಚೀಗೆರೆ ಗ್ರಾಮದ ಶನೇಶ್ಚರಸ್ವಾಮಿ ದೇವಸ್ಥಾನದ 41ನೇ ವರ್ಷದ ಜಾತ್ರಾ ಮಹೋತ್ಸವ ಫೆ.28ರಿಂದ ಮಾ.1ರವರೆಗೆ ನಡೆಯಲಿದೆ ಎಂದು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್ ತಿಳಿಸಿದರು.
28ರಂದು ಬೆಳಗ್ಗೆ 7.30ರಿಂದ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯ ನೆರವೇರಲಿವೆ. ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಮಧ್ಯಾಹ್ನ 2 ರಿಂದ 5 ಗಂಟೆವರೆಗೆ ತಲೆಮುಡಿ ಸೇವೆ ನಡೆಯಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಂಜೆ 5ರಿಂದ 7.30ರವರೆಗೆ ವೀರಗಾಸೆ, ವಾದ್ಯ ಮೆರವಣಿಗೆ ಮೂಲಕ ಮೀಸಲು ನೀರು ತರಲಾಗುವುದು. ತರಿಕೆರೆ ಗ್ರಾಮಸ್ಥರಿಂದ ಕರಿಯಣ್ಣ, ಕೆಂಚಣ್ಣ ದೇವರುಗಳು ಮಣಿಸೇವೆ ನಡೆಯಲಿದೆ. ರಾತ್ರಿ 7.30ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ವಿನಾಯಕ ಗೆಳೆಯರ ಬಳಗದಿಂದ ಸಿನಿ ಮ್ಯೂಸಿಕ್, ಶ್ರೀಕಾಂತ ತಂಡದಿಂದ ಸುಗಮ ಸಂಗೀತ ಮತ್ತು ಭಕ್ತಿಗೀತೆ, ಸರಿಗಮಪ ಖ್ಯಾತಿಯ ಜ್ಞಾನ ಗುರುರಾಜ್ ಅವರಿಂದ ಸುಗಮ ಸಂಗೀತ, ಮಿಮಿಕ್ರಿ ಗೋಪಿ ಅವರಿಂದ ಹಾಸ್ಯ, ಬಿ.ಪಿ.ಗೌತಮಿ ಅವರಿಂದ ಭರತನಾಟ್ಯ, ವಿದ್ವಾನ್ ಸತೀಶ್‌ಕುಮಾರ್ ತಾಂಡವಮೂರ್ತಿ ತಂಡದಿಂದ ಶಾಸ್ತ್ರೀಯ ಸಂಗೀತ ನಡೆಯಲಿದೆ. ಶಾಸಕ ರವಿಕುಮಾರ್ ಗಣಿಗ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಭಾಗವಹಿಸಲಿದ್ದಾರೆ. ಇದೇ ವೇಳೆ ಕಿರುತೆರೆ ನಟ ಕಿರಣ್‌ರಾಜ್ ಹಾಗೂ ನಿವೃತ್ತ ಸೈನಿಕ ಯೋಗೇಶ್ ಅವರನ್ನು ಅಭಿನಂದಿಸಲಾಗುವುದು ಎಂದು ವಿವರಿಸಿದರು.
ರಾತ್ರಿ 9ರಿಂದ 11ರವರೆಗೆ ಅನ್ನ ಸಂತರ್ಪಣೆ ನೆರವೇರಲಿದ್ದು, ಬೆಳಗ್ಗೆ 5ರವರೆಗೆ ಅದ್ದೂರಿ ಬೆಳ್ಳಿ ಗಿಂಡಿ ಪೂಜೆ, ಶನೇಶ್ಚರಸ್ವಾಮಿ ಬೆಳ್ಳಿ ರಥೋತ್ಸವ, ಮಲೆ ಮಹದೇಶ್ವರ ಸ್ವಾಮಿಯ ಹುಲಿವಾಹನೋತ್ಸವ ನಡೆಯಲಿದೆ. ಮಾ.1ರ ಬೆಳಗ್ಗೆ 7ರಿಂದ 12ರವರೆಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ದೇವಾಲಯದ ಪ್ರಧಾನ ಅರ್ಚಕ ಪ್ರಸನ್ನ, ಮುಖಂಡರಾದ ಮಹಂತಪ್ಪ, ಶಂಕರಪ್ಪ ಇತರರಿದ್ದರು.