ಮಳವಳ್ಳಿ ಪಟ್ಟಣದಲ್ಲಿ ಆ.15 ರಂದು ನಡೆಯಲಿರುವ ಬೃಹತ್ ರಕ್ತದಾನ ಶಿಬಿರ ಲಾಂಛನವನ್ನು ಗ್ರಾಮಸ್ಥರು, ಮುಖಂಡರು ಹಾಗೂ ಯುವಕರು ಬಿಡುಗಡೆ ಮಾಡಿದರು. ವೆಂಕಟಪ್ಪ, ಮಾದೇಶೆಟ್ಟಿ, ಇತರರಿದ್ದರು.  
ಮಂಡ್ಯ

ಪ್ರತಿಯೊಬ್ಬರು ರಕ್ತದಾನ ಮಾಡಿ

ಪ್ರಜ್ವಲ್.ಎನ್

ಪ್ರಮುಖ ಮುಖ್ಯಾಂಶಗಳು

  • ಗ್ರಾಮದ ಮುಖಂಡ ಎಂ.ಮಯೂರ ಕರೆ
ಮಳವಳ್ಳಿ: ರಕ್ತದಾನ ಮಾಡುವ ಪ್ರತಿಯೊಬ್ಬರ ಆರೋಗ್ಯದ ವೃದ್ಧಿಯ ಜತೆಗೆ, ಸಾವು ಬದುಕಿನೊಡನೆ ಹೋರಾಡುವ ಜೀವಗಳನ್ನು ಉಳಿಸಲು ಸಹಕಾರ ಮಾಡಿದಂತಾಗುತ್ತದೆ ಎಂದು ತಾಲೂಕಿನ ಬೆಳಕವಾಡಿ ಗ್ರಾಮದ ಮುಖಂಡ ಎಂ.ಮಯೂರ ತಿಳಿಸಿದರು.
ಮಳವಳ್ಳಿ ಪಟ್ಟಣದ ರೋಟರಿ ಶಾಲೆಯಲ್ಲಿ ಆ.15 ರಂದು ನಡೆಯುವ ಐತಿಹಾಸಿಕ ರಕ್ತದಾನ ಶಿಬಿರದ ಹಿನ್ನೆಲೆ ಗ್ರಾಮದ ಕಟ್ಟೆ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಪೂರ್ವ ಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಮತ್ತೊಂದು ಜೀವದ ಉಳಿವಿಗೆ ಸಂಜೀವಿನಿಯಾಗಿರುವ ರಕ್ತವನ್ನು ದಾನ ಮಾಡುವುದು ಪುಣ್ಯದ ಕೆಲಸವಾಗಿದೆ ಎಂದ ಅವರು, ಹಲವು ವರ್ಷಗಳಿಂದ ತಾಲೂಕಿನ ವ್ಯಾಪ್ತಿಯಲ್ಲಿ ಯುವಕರ ತಂಡ ರಕ್ತದಾನ ಶಿಬಿರವನ್ನು ದಾಖಲೆ ಪ್ರಮಾಣದಲ್ಲಿ ನಡೆಸುವ ಮೂಲಕ ಸಂಕಷ್ಟದಲ್ಲಿರುವ ಜನರ ಜೀವಕ್ಕೆ ಸಂಜೀವಿನಿ ನೀಡುವ ಸತ್ಕಾರ್ಯದಲ್ಲಿ ತೊಡಗಿದ್ದು, ಇವರ ಸಮಾಜಮುಖಿ ಕಾರ್ಯಕ್ಕೆ ಎಲ್ಲರೂ ಜಾತಿ, ಭೇದ ಹಾಗೂ ರಾಜಕೀಯ ಹೊರತು ಪಡಿಸಿ ಸಹಕರಿಸಬೇಕೆಂದು ಕರೆ ನೀಡಿದರು.
ಸಭೆಯಲ್ಲಿ ಗ್ರಾ.ಪಂ.ಅಧ್ಯಕ್ಷ ವೆಂಕಟಪ್ಪ, ಮುಖಂಡರಾದ ಮಾದೇಶೆಟ್ಟಿ, ಮಹದೇವಸ್ವಾಮಿ, ಅಬ್ದುಲ್ ಕಲೀಲ್ , ಹರ್ಷದ್ ಪಾಷಾ, ಕಾಂತರಾಜು, ಶಿಬಿರದ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.