ಬಲಮುರಿ ಪ್ರವಾಸಿ ತಾಣದ ಸಾಂರ್ದಭಿಕ ಪೋಟ 
ಮಂಡ್ಯ

ಬಲಮರಿ, ಎಡಮುರಿಗೆ ಪ್ರವೇಶ ನಿಷೇಧ

ನಾಗೇಶ ಎಸ್
ಕೆ.ಆರ್.ಸಾಗರ: ಬೆಳಗೊಳ ಗ್ರಾಮದ ಬಳಿಯ ಕಾವೇರಿ ನದಿ ತೀರದ ಬಲಮುರಿ ಹಾಗೂ ಎಡಮುರಿ ಪ್ರವಾಸಿ ತಾಣಗಳಿಗೆ ಮತ್ತು ಕೆ.ಆರ್.ಸಾಗರ ಅಣೆಕಟ್ಟೆಯ ಹಿನ್ನಿರಿನ ಪ್ರದೇಶ, ವೇಣುಗೋಪಾಲ ದೇವಾಲಯದ ತೀರ, ಚಿಕ್ಕಾಯರಹಳ್ಳಿ ಗ್ರಾಮದ ಕೋಳು ಭಾವಿಕಟ್ಟೆಗೆ ಡಿ.31ರಿಂದ ಜನವರಿ 1ರ ರಾತ್ರಿ ವರೆಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧ ಮಾಡಿ ಶ್ರೀರಂಗಪಟ್ಟಣ ಮತ್ತು ಪಾಂಡವಪುರ ತಹಸೀಲ್ದಾರ್ ಆದೇಶ ಮಾಡಿದ್ದಾರೆ.
ಶಾಂತಿ ಸುವ್ಯವಸ್ಥೆ ಹಾಗೂ ಕಾನೂನು ಪಾಲನೆ ದೃಷ್ಟಿಯಿಂದ ಕೆ.ಆರ್.ಸಾಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಲಮುರಿ, ಎಡಮುರಿ ಹಾಗೂ ಕೆ.ಆರ್.ಸಾಗರ ಅಣೆಕಟ್ಟೆಯ ಹಿನ್ನಿರಿನ ಪ್ರದೇಶಗಳು ಹಾಗೂ ಕಾವೇರಿ ನದಿ ತೀರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವೇಶ ನಿಷೇಧಿಸಲಾಗಿದೆ. ಆದೇಶ ಉಲ್ಲಂಘನೆ ಮಾಡಿ ನದಿ ತೀರದಲ್ಲಿ ಮೋಜು-ಮಸ್ತಿ ಕಂಡು ಬಂದರೆ ಕಾನೂನು ಕ್ರಮ ಜರುಗಿಸುವುದಾಗಿ ಪೊಲೀಸ್ ಇಲಾಖೆ ತಿಳಿಸಿದೆ.