ಕೆ.ಎಂ.ದೊಡ್ಡಿಯಲ್ಲಿ ಪ್ರಗತಿಪರ ಸಂಘಟನೆಗಳು ಖಾಲಿ ಬಿಂದಿಗೆ ಹಿಡಿದು ಹೆದ್ದಾರಿಯಲ್ಲಿ ವಾಹನಗಳ ಸಂಚಾರ ತಡೆದು ಪ್ರತಿಭಟಿಸಿದರು. 
ಮಂಡ್ಯ

ಕೆ.ಎಂ.ದೊಡ್ಡಿಯಲ್ಲಿ ಖಾಲಿ ಬಿಂದಿಗೆಗಳ ಪ್ರದರ್ಶನ

ಎಂ.ರವಿ

ಕೆ.ಎಂ.ದೊಡ್ಡಿ: ಇಲ್ಲಿನ ವಿಶ್ವೇಶ್ವರಯ್ಯ ವೃತ್ತದ ಬಳಿ ಜಮಾಯಿಸಿದ ಪ್ರಗತಿಪರ ಸಂಘಟನೆ ಮತ್ತು ರೈತ ಸಂಘದ ಕಾರ್ಯಕರ್ತರು ಮದ್ದೂರು-ಮಳವಳ್ಳಿ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ತಡೆದು ಪ್ರತಿಭಟಿಸಿ ನೀರು ಹರಿಸುವ ಕ್ರಮದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಗತಿಪರ ಸಂಘಟನೆ ಅಧ್ಯಕ್ಷ ಪ್ರೊ.ಬಿ.ಎಸ್.ಬೋರೇಗೌಡ ಮಾತನಾಡಿ, ಕಾವೇರಿ ಕೊಳ್ಳದ ರೈತರ ಬೆಳೆಗಳು ಒಣಗುತ್ತ ಸಂಕಷ್ಟದಲ್ಲಿದ್ದರೂ ಸಿಡಬ್ಲುೃಆರ್‌ಸಿ ತಮಿಳುನಾಡಿಗೆ ನೀರು ಹರಿಸಲು ಆದೇಶ ಮಾಡಿರುವ ಕ್ರಮ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಕುರಿಕೆಂಪನದೊಡ್ಡಿ ರಾಮಲಿಂಗೇಗೌಡ, ಕೆ.ಪಿ.ದೊಡ್ಡಿ ಶಿವರಾಮು, ದೊ.ಚಿ.ಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ,ಕರಡಕೆರೆ ಯೋಗೇಶ್, ಮುಖಂಡರಾದ ಕೆ.ಟಿ.ಸುರೇಶ್, ಅಣ್ಣೂರು ವಿನು, ರಘು ವೆಂಕಟೇಗೌಡ, ಚಿಕ್ಕಮರಿಗೌಡ, ಕೆ.ಪಿ.ದೊಡ್ಡಿ, ಪುಟ್ಟಸ್ವಾಮಿ, ಕರಡಕೆರೆ ಕೃಷ್ಣ, ಕಾರ್ಕಹಳ್ಳಿ ಮಹೇಶ, ಕ್ಯಾತಘಟ್ಟ ಅಂದಾನಿ, ಚಿಕ್ಕರಸಿನಕೆರೆ ಮೂರ್ತಿ, ವಿಕಾಶ್ ಬೋರೇಗೌಡ, ಬೊಪ್ಪಸಮುದ್ರ ಮಲ್ಲೇಶ್ ಭಾಗವಹಿಸಿದ್ದರು.
ಬಂದ್ ಯಶಸ್ವಿ: ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಆದೇಶ ಮಾಡಿರುವ ಕ್ರಮದ ವಿರುದ್ಧ ಕರೆ ನೀಡಿದ್ದ ಬಂದ್ ಕೆ.ಎಂ.ದೊಡ್ಡಿಯಲ್ಲಿ ಭಾಗಶಃ ಯಶಸ್ವಿಯಾಯಿತು.
ವರ್ತಕರು ಸ್ವಯಂಪ್ರೇರಿತರಾಗಿ ಬಂದ್ ನಡೆಸಿ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ವರ್ತಕರ ಸಂಘ ಬಂದ್‌ಗೆ ಸಂರ್ಪೂಣ ಸಹಕಾರ ನೀಡಿತ್ತು. ಬೆಳಗ್ಗೆಯಿಂದ ಸಂಜೆ 6 ಗಂಟೆವರೆಗೆ ಬಂದ್ ನಡೆಸಿದರು. ಮೆಡಿಕಲ್ ಶಾಪ್ ನಂದಿನಿ ಪಾರ್ಲರ್ , ಆಸ್ಪತ್ರೆ ಮತ್ತು ಶಾಲಾ ಕಾಲೇಜು ಹೊರತುಪಡಿಸಿ ಎಲ್ಲ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಸಹಕರಿಸಿದರು.