ಮದ್ದೂರು ತಾಲೂಕಿನ ನಿಲುವಾಗಿಲು ಗ್ರಾಮದಲ್ಲಿ ಶ್ರೀ ಬೋರೇಶ್ವರ ಸೇವಾ ಟ್ರಸ್ಟ್ ವತಿಯಿಂದ ಶಾಸಕ ಕೆ.ಎಂ.ಉದಯ್ ಅವರನ್ನು ಅಭಿನಂದಿಸಲಾಯಿತು. ಕೆ.ಟಿ.ಶಿವಕುಮಾರ್, ವೈರಮುಡಿ, ಗೋವಿಂದರಾಜು, ಶಿವಮ್ಮ ಇದ್ದರು. 
ಮಂಡ್ಯ

ಎನ್.ಕೋಡಿಹಳ್ಳಿ ಗ್ರಾಮದ ಅಭಿವೃದ್ಧಿಗೆ ಒತ್ತು

ಮದ್ದೂರು: ತಾಲೂಕಿನ ಎನ್.ಕೋಡಿಹಳ್ಳಿ ಗ್ರಾಮಕ್ಕೆ ಶನಿವಾರ ಭೇಟಿ ನೀಡಿದ ಶಾಸಕ ಕೆ.ಎಂ.ಉದಯ್ ಅವರು ಗ್ರಾಮದಲ್ಲಿ ಶಿಥಿಲಗೊಂಡಿರುವ ಶ್ರೀ ಮಂಚಮ್ಮ ದೇವಸ್ಥಾನವನ್ನು ವೀಕ್ಷಿಸಿದರು.
ನಂತರ ಮಾತನಾಡಿದ ಶಾಸಕ ಕೆ.ಎಂ.ಉದಯ್, ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಶ್ರೀ ಮಂಚಮ್ಮ ದೇವಸ್ಥಾನರ ಜೀರ್ಣೋದ್ಧಾರಕ್ಕೆ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು. ಇದೇ ವೇಳೆ ಶ್ರೀ ಬೋರೇಶ್ವರ ಸೇವಾ ಟ್ರಸ್ಟ್ ವತಿಯಿಂದ ಶಾಸಕ ಕೆ.ಎಂ.ಉದಯ್ ರವರನ್ನು ಅಭಿನಂದಿಸಲಾಯಿತು.
ಟ್ರಸ್ಟ್ ಅಧ್ಯಕ್ಷ ಕೆ.ಟಿ.ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ವೈರಮುಡಿ ನಿರ್ದೇಶಕ ಕೆ.ಜೆ.ಗೋವಿಂದರಾಜು, ಗ್ರಾಪಂ ಮಾಜಿ ಸದಸ್ಯೆಯರಾದ ಶಿವಮ್ಮ, ಪುಟ್ಟಬೋರಮ್ಮ, ಮುಖಂಡರಾದ ಕೆ.ಟಿ.ಸತ್ಯ, ಕೆ.ಎಂ.ಸತೀಶ್, ಕೆ.ಸಿ.ಸುನಿಲ್, ಡಿ.ಕೆ.ರಾಮು, ಉಮೇಶ್, ವೆಂಕಟೇಶ್, ಶಿವಣ್ಣ, ಬೋರಯ್ಯ, ಪುಟ್ಟಲಿಂಗಯ್ಯ, ಕೆ.ಟಿ.ನಾಗರಾಜ್, ಕುಮಾರಿ, ಮಂಗಳಗೌರಿ ಇದ್ದರು.