ಅಹಿಂದ ಸಂರಕ್ಷಣಾ ವೇದಿಕೆಯ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಪರಿನಿಬ್ಬಾಣ ದಿನದ ಅಂಗವಾಗಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯ ಮುಂಭಾಗ ಮೇಣದ ಬತ್ತಿ ಹಚ್ಚುವ ಮೂಲಕ ಆಚರಣೆ ಮಾಡಲಾಯಿತು. ಮಲವರಾಜ್, ಶ್ರೀನಿವಾಸಶೆಟ್ರು, ಪಿ.ಶಶಿಕುಮಾರ್, ಅಸೀಫ್‌ಪಾಷಾ, ಮಹದೇವ, ಯಶೋದಾ, ಗೌಸ್ ಇದ್ದರು.
- ಅಹಿಂದ ಸಂರಕ್ಷಣಾ ವೇದಿಕೆ ಅಧ್ಯಕ್ಷ ಮಲವರಾಜ್ ಸಲಹೆ
- ಪರಿನಿಬ್ಬಾಣ ದಿನ
ಮದ್ದೂರು: ಅಹಿಂದ ಸಂರಕ್ಷಣಾ ವೇದಿಕೆ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಪರಿನಿಬ್ಬಾಣ ದಿನ ಅಂಗವಾಗಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯ ಮುಂದೆ ಶನಿವಾರ ಮೇಣದ ಬತ್ತಿ ಹಚ್ಚುವ ಮೂಲಕ ಆಚರಣೆ ಮಾಡಲಾಯಿತು.
ಅಹಿಂದ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಮಲವರಾಜ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಪರಿನಿಬ್ಬಾಣ ಹೊಂದಿರಬಹುದು. ಆದರೆ ಅವರ ಆದರ್ಶಗಳನ್ನು ಅಮರವಾಗಿವೆ ಎಂದು ತಿಳಿಸಿದರು.
ಅಂಬೇಡ್ಕರ್ ಅವರ ಕುರಿತು ಹೆಚ್ಚಿನ ಅಧ್ಯಯನ ಮಾಡಿ ಅವರ ತತ್ವಾದರ್ಶಗಳನ್ನು ಇಂದಿನ ಯುವ ಜನಾಂಗ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಶೆಟ್ರು, ಸಂಘಟನಾ ಕಾರ್ಯದರ್ಶಿ ಪಿ.ಶಶಿಕುಮಾರ್, ಸಂಚಾಲಕ ಅಸೀಫ್ ಪಾಷಾ, ನಿರ್ದೇಶಕ ಕೆ.ಟಿ.ಶಿವಕುಮಾರ್, ಮಹದೇವಯ್ಯ, ಮುಖಂಡ ಸುಶೀಲಮ್ಮ, ಮಹದೇವ, ಯಶೋದಾ, ಗೌಸ್, ರಾಜ್ ಕುಮಾರ್, ಮಹಾಲಿಂಗಯ್ಯ, ನಾಗರಾಜ್, ಮಹೇಶ್, ಶಿವಕುಮಾರ್ ಇದ್ದರು.