ಎಳ್ಳಿನ ಅಮಾವಾಸ್ಯೆ ಅಂಗವಾಗಿ ಮದ್ದೂರು ನಗರದ ಪುರಾಣ ಪ್ರಸಿದ್ಧ ಹೊಳೆ ಆಂಜನೇಯಸ್ವಾಮಿ ದೇಗುಲದಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಿರುವುದು. 
ಮಂಡ್ಯ

ಮದ್ದೂರಿನಾದ್ಯಂತ ಎಳ್ಳಮಾವಾಸ್ಯೆ ಪೂಜೆ

ಶಿವಶಂಕರ್ ಎಂ. ಹೆಬ್ಬಳ್ಳ

ಪ್ರಮುಖ ಮುಖ್ಯಾಂಶಗಳು

  • ವಿವಿಧ ದೇವಾಲಯಗಳಲ್ಲಿ ಪೂಜಾ ಕಾರ್ಯಕ್ರಮ
ಮದ್ದೂರು : ಎಳ್ಳ ಅಮಾವಾಸ್ಯೆ ಅಂಗವಾಗಿ ನಗರ ಸೇರಿದಂತೆ ತಾಲೂಕಿನ ವಿವಿಧ ದೇವಾಲಯಗಳಲ್ಲಿ ಪೂಜಾ ಕಾರ್ಯಕ್ರಮಗಳನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
ನಗರದ ಪುರಾಣ ಪ್ರಸಿದ್ಧ ದೇವಾಲಯಗಳಾದ ಮದ್ದೂರಮ್ಮ, ಉಗ್ರ ನರಸಿಂಹ ಸ್ವಾಮಿ, ಹೊಳೆ ಆಂಜನೇಯ ಸ್ವಾಮಿ, ಕಾಶಿ ವಿಶ್ವೇಶ್ವರ ಸ್ವಾಮಿ ಹಾಗೂ ತಾಲೂಕಿನ ಚಿಕ್ಕ ಅಂಕನಹಳ್ಳಿಯ ನಂದಿ ಬಸವೇಶ್ವರ ಸ್ವಾಮಿ, ವೈದ್ಯನಾಥಪುರ ಗ್ರಾಮದ ವೈದ್ಯನಾಥೇಶ್ವರ ಸ್ವಾಮಿ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ದೇವರಿಗೆ ವಿಶೇಷವಾಗಿ ಅಲಂಕಾರ ಮಾಡಿ ಆಗಮಿಸಿದ ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು. ಮುಂಜಾನೆಯಿಂದಲೇ ದೇಗುಲಕ್ಕೆ ಆಗಮಿಸಿದ ಭಕ್ತರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಶನೈಶ್ಚರ ದೇವರ ದೇಗುಲದಲ್ಲಿ ವಿಶೇಷ ಪೂಜೆ : ಮದ್ದೂರು: ಎಳ್ಳಿನ ಅಮಾವಾಸ್ಯೆ ತಾಲೂಕಿನ ಹೊಂಬಾಳೆ ಗೌಡನ ದೊಡ್ಡಿ ಗ್ರಾಮದಲ್ಲಿರುವ ಶನೈಶ್ಚರ ದೇವರ ದೇಗುಲದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ವಿಜೃಂಭಣೆಯಿಂದ ಶುಕ್ರವಾರ ನಡೆಯಿತು.
ವಿಶೇಷ ಎಳ್ಳಮವಾಸ್ಯೆ ಪ್ರಯುಕ್ತ ಭಕ್ತರು ಬೆಳಗಿನ ಜಾವ ಎರಡು ಗಂಟೆಯಿಂದಲೇ ಎಳ್ಳು ಬತ್ತಿಯನ್ನು ಹಚ್ಚಿ ಭಕ್ತಿ ಮೆರೆದರು. ದೇವಸ್ಥಾನದ ಅರ್ಚಕ ಸಚಿನ್ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆದವು. ಭಕ್ತರಿಗೆ ತೀರ್ಥ, ಪ್ರಸಾದ ವಿತರಣೆ ಮಾಡಲಾಯಿತು.