ಮದ್ದೂರು ತಾಲೂಕಿನ ಕೆ.ಬೆಳ್ಳೂರು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷರಾಗಿ ರಾಜಣ್ಣ, ಉಪಾಧ್ಯಕ್ಷರಾಗಿ ಸಿ.ಎಂ.ಶ್ರೀಧರ್ ಅವಿರೋಧವಾಗಿ ಆಯ್ಕೆಯಾದರು. ದೇವರಾಜು, ಬೋರರಾಜು, ರಮೇಶ್, ಸಿದ್ದಪ್ಪ, ರಂಗಸ್ವಾಮಿ, ಕೆ.ಕೃಷ್ಣ, ರತ್ನಮ್ಮ, ಜಯಲಕ್ಷಮ್ಮ, ನಿಂಗಾಜಮ್ಮ, ಕೆಂಪರಾಜು, ಜಯರಾಮು, ಯೋಗೇಶ್, ಮೂಗಪ್ಪ, ಅಪ್ಪಾಜಿಗೌಡ ಇದ್ದರು. 
ಮಂಡ್ಯ

ಕೃಷಿ ಸಹಕಾರ ಸಂಘಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಮದ್ದೂರು: ತಾಲೂಕಿನ ಕೆ.ಬೆಳ್ಳೂರು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷರಾಗಿ ರಾಜಣ್ಣ, ಉಪಾಧ್ಯಕ್ಷರಾಗಿ ಸಿ.ಎಂ.ಶ್ರೀಧರ್ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಸಭಾಂಗಣದಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ಇಬ್ಬರನ್ನು ಹೊರತುಪಡಿಸಿ ಬೇರೆ ಯಾರೂ ನಾಮ ಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಇವರ ಆಯ್ಕೆಯನ್ನು ಚುನಾವಣಾಧಿಕಾರಿ ಡಿ.ಆಶಾ ಘೋಷಿಸಿದರು.
ನೂತನ ಅಧ್ಯಕ್ಷ ರಾಜಣ್ಣ ಮಾತನಾಡಿ, ಸಂಘದ ಎಲ್ಲ ನಿರ್ದೇಶಕರನ್ನು ವಿಶ್ವಾಸಕ್ಕೆ ಪಡೆದು ಸಂಘದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ಜತೆಗೆ ಷೇರುದಾರರಿಗೆ ಹಾಗೂ ರೈತರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆಂದು ವಿಶ್ವಾಸ ವ್ಯಕ್ತಪಡಿಸಿದರು.
ನಿರ್ದೇಶಕರಾದ ದೇವರಾಜು, ಬೋರರಾಜು, ರಮೇಶ್, ಸಿದ್ದಪ್ಪ, ರಂಗಸ್ವಾಮಿ, ಕೆ.ಕೃಷ್ಣ, ರತ್ನಮ್ಮ, ಜಯಲಕ್ಷಮ್ಮ, ನಿಂಗಾಜಮ್ಮ, ಗ್ರಾಪಂ ಮಾಜಿ ಅಧ್ಯಕ್ಷ ಕೆಂಪರಾಜು, ಮುಖಂಡರಾದ ಜಯರಾಮು, ಯೋಗೇಶ್, ಮೂಗಪ್ಪ, ಅಪ್ಪಾಜಿಗೌಡ, ಪುಟ್ಟಸ್ವಾಮಿ, ಈರಣ್ಣ, ದೇವರಾಜು, ಮಾದೇಶ್, ಸಿದ್ದರಾಜು ಇತರರು ಇದ್ದರು.