ಮಂಡ್ಯದ ಶ್ರೀರಾಮನಗರದ ಎಂ.ಆರ್ ಸಭಾಂಗಣದಲ್ಲಿ ದ್ವಾರಕಾ ಅಲಯನ್ಸ್ ಸಂಸ್ಥೆ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಆಯೋಜಿಸಲಾಗಿತ್ತು. 
ಮಂಡ್ಯ

ವಿದೇಶಿ ವಸ್ತುಗಳ ಬಳಕೆ ಕಡಿಮೆ ಮಾಡಿ: ಅಲಯನ್ಸ್ ಸಂಸ್ಥೆ ಕಾರ್ಯದರ್ಶಿ ಡಾ.ನಾಗರಾಜು ವಿ.ಬೈರಿ ಸಲಹೆ

ಪ್ರಮುಖ ಮುಖ್ಯಾಂಶಗಳು

  • ಶ್ರೀರಾಮನಗರದ ಎಂ.ಆರ್ ಸಭಾಂಗಣದಲ್ಲಿ ಪದಗ್ರಹಣ ಸಮಾರಂಭ
  • ಮಂಡ್ಯ ದ್ವಾರಕಾ ಅಲಯನ್ಸ್ ಸಂಸ್ಥೆಯಿಂದ ಆಯೋಜನೆ
ಮಂಡ್ಯ: ಭಾರತೀಯರು ವಿದೇಶಿ ವಸ್ತುಗಳಾದ ಪೆಟ್ರೋಲ್, ಡೀಸೆಲ್, ಚಿನ್ನ, ರಸಗೊಬ್ಬರ ಖರೀದಿ ಕಡಿಮೆ ಮಾಡಿ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಕಾರ್ಯದರ್ಶಿ ಡಾ.ನಾಗರಾಜು ವಿ.ಬೈರಿ ಹೇಳಿದರು.
ಇಲ್ಲಿನ ಶ್ರೀರಾಮನಗರದ ಎಂ.ಆರ್ ಸಭಾಂಗಣದಲ್ಲಿ ಆಯೋಜಿಸಿದ್ದ ಮಂಡ್ಯ ದ್ವಾರಕಾ ಅಲಯನ್ಸ್ ಸಂಸ್ಥೆ ಪ್ರಾರಂಭ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೋವಿಡ್-19ರ ನಂತರ ಭಾರತ ಜಾಗತಿಕ ಯುದ್ದದ ಪರಿಣಾಮದಿಂದ ಸಾಕಷ್ಟು ಸವಾಲುಗಳನ್ನು ಎದುರಿಸುವಂತಾಗಿದೆ. ವಿದೇಶಿ ವಿನಿಮಯ ಮೀಸಲು ರಕ್ಷಿಸಲು ಮತ್ತು ದೇಶದ ಆರ್ಥಿಕತೆಯನ್ನು ಬಲಪಡಿಸಲು ಪೆಟ್ರೋಲ್, ಡೀಸೆಲ್ ಮತ್ತು ಚಿನ್ನದ ಖರೀದಿಯನ್ನು ಕಡಿಮೆ ಮಾಡುವುದು ಅತ್ಯವಶ್ಯಕವಿದೆ ಎಂದರು.
ವಿದೇಶಿ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು ಸಾರ್ವಕಾಲಿಕ ಕನಿಷ್ಟ ಮಟ್ಟ ಸುಮಾರು 96 ರೂ.ಗೆ ಕುಸಿದಿದೆ. ಆದ್ದರಿಂದ ವಿದೇಶಿ ವಸ್ತುಗಳ ಆಮದು ಕಡಿಮೆ ಮಾಡಬೇಕಿದೆ. ಚಿನ್ನ, ಕಚ್ಚಾತೈಲ ಕಡಿಮೆ ಬಳಸಿ, ಎಲೆಕ್ಟಿಕ್ ವಾಹನಗಳ ಬಳಕೆ ಹೆಚ್ಚಿಸಬೇಕಿದೆ. ಬ್ಯಾಂಕ್ ಮೂಲಕ ಹಣ ವ್ಯವಹಾರ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಮಂಡ್ಯ ದ್ವಾರಕ ಅಲಯನ್ಸ್ ಸಂಸ್ಥೆ ಅಧ್ಯಕ್ಷೆ ಟಿ.ಪವಿತ್ರಾ ನಾಗರಾಜ್ ಮಾತನಾಡಿ, ಇತ್ತೀಚೆಗೆ ಮಹಿಳೆಯಲ್ಲಿ ಕ್ಯಾನ್ಸರ್‌ನಂತ ರೋಗ ಲಕ್ಷಣಗಳು ಹೆಚ್ಚಾಗುತ್ತಿವೆ. ಗರ್ಭಕಂಠ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಬಿಪಿ, ಶುಗರ್ ನಿಯಂತ್ರಣಕ್ಕೆ ಆರೋಗ್ಯ ಶಿಬಿರಗಳನ್ನು ಅಲಯನ್ಸ್ ಸಂಸ್ಥೆ ಮೂಲಕ ಆಯೋಜಿಸಲಾಗುತ್ತಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಿ. ಪರಿಸರ ಸಂರಕ್ಷಣೆ, ವಿಶ್ವನಾಯಕರ ಜನ್ಮದಿನ, ಆರೋಗ್ಯ ಮತ್ತು ಆರ್ಥಿಕ ಪ್ರಗತಿಯ ಜಾಗೃತಿ ಅಭಿಯಾನಗಳನ್ನು ಎಲ್ಲರ ಸಹಕಾರದಲ್ಲಿ ಆಯೋಜಿಸಿ ಮಾದರಿ ಸೇವೆ ನೀಡಲು ಸಂಕಲ್ಪ ಮಾಡೋಣ ಎಂದು ಮನವಿ ಮಾಡಿದರು.
ಅಲಯನ್ಸ್ ಸಂಸ್ಥೆ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು, 1ನೇ ಜಿಲ್ಲಾ ಉಪ ಪ್ರಾಂತಪಾಲ ಚಂದ್ರಶೇಖರ್, 2ನೇ ಉಪ ಪ್ರಾಂತಪಾಲ ಶಿವಣ್ಣ, ಸಂಪುಟ ಕಾರ್ಯದರ್ಶಿ ಧನಂಜಯ್, ಖಜಾಂಚಿ ನಾಗರಾಜು, ಪಿಆರ್‌ಒ ನೀನಾಪಟೇಲ್, ಜಿಲ್ಲಾ ರಾಯಭಾರಿ ಡಾ.ವೈ.ಎಚ್.ರತ್ನಮ್ಮ, ಪ್ರಾಂತೀಯ ಅಧ್ಯಕ್ಷ ಕುಮಾರ್, ವಲಯಾಧ್ಯಕ್ಷ ಮೋಹನ್, ಬೇಲೂರು ಗ್ರಾ.ಪಂ ಮಾಜಿ ಅಧ್ಯಕ್ಷ ಹೊಂಬೇಗೌಡ, ದ್ವಾರಕಾ ಅಲಯನ್ಸ್ ಸಂಸ್ಥೆ ಉಪಾಧ್ಯಕ್ಷೆ ಶೋಭಾ, ಕಾರ್ಯದರ್ಶಿ ಪ್ರೀತಿ, ಖಜಾಂಚಿ ಶಿವರಂಜನಿ, ಪಿಆರ್‌ಒ ಚಂದ್ರಮ್ಮ ಇತರರಿದ್ದರು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.