ಮಂಡ್ಯದ ಕೆಎಚ್‌ಬಿ ಬಡಾವಣೆಯ ಮಹಾರಾಜ ಬಳಗದಿಂದ ಆಯೋಜಿಸಿರುವ ನಾಟಕ ಪ್ರದರ್ಶನದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
- ಬಡಾವಣೆಯ ನಿವಾಸಿಗಳಿಂದಲೇ ನಾಟಕ ಪ್ರದರ್ಶನ
- ಮೂರು ತಿಂಗಳಿನಿಂದ ಸತತ ಅಭ್ಯಾಸ
- ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ
ಮಂಡ್ಯ: ಇಲ್ಲಿನ ಕೆಎಚ್‌ಬಿ ಬಡಾವಣೆಯ ಮಹಾರಾಜ ಬಳಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮೇ 23ರಂದು ಬೆಳಗ್ಗೆ 10 ಗಂಟೆಗೆ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಕುರುಕ್ಷೇತ್ರ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ಬಳಗದ ಅಧ್ಯಕ್ಷ ಹರೀಶ್ ಬಾಣಸವಾಡಿ ತಿಳಿಸಿದರು.
ಕೆಎಚ್‌ಬಿ ಬಡಾವಣೆಯ ನಿವಾಸಿಗಳೇ ನಾಟಕದಲ್ಲಿ ಪ್ರದರ್ಶನ ನೀಡಲಿದ್ದಾರೆ. ಇದಕ್ಕಾಗಿ ಮೂರು ತಿಂಗಳಿನಿಂದ ಅಭ್ಯಾಸ ಮಾಡಲಾಗಿದೆ. ಅಂತೆಯೇ ಮಧ್ಯಾಹ್ನ 3 ಗಂಟೆಗೆ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕೆಎಎಸ್ ಅಧಿಕಾರಿ ಯೋಗಾನಂದ ಉದ್ಘಾಟಿಸುವರು. ತಿಮ್ಮದಾಸ್ ಗ್ರೂಪ್ ಮಾಲೀಕ ಸಿ.ಟಿ.ಶಂಕರ್ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು. ಶಾಸಕ ಪಿ.ರವಿಕುಮಾರ್ ಗಣಿಗ ಅಧ್ಯಕ್ಷತೆ ವಹಿಸುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ ಅಭಿನಂದನಾ ನುಡಿಯನ್ನಾಡುವರು. ಜಿ.ಪಂ ಮಾಜಿ ಸದಸ್ಯ ಎನ್.ಶಿವಣ್ಣ ಚಂದಗಾಲು ಅವರು ಅಭಿನಂದಿತರನ್ನು ಗೌರವಿಸುವರು. ವರ್ಗಾವಣೆಗೊಂಡಿರುವ ಜಂಟಿ ಕೃಷಿ ನಿರ್ದೇಶಕ ಎ.ಎಸ್.ಅಶೋಕ್ ಅವರಿಗೆ ರೈತ ಮಿತ್ರ, ಸಮಾಜ ಸೇವಕ ಡಾ.ಎಚ್.ಸಿ.ಆನಂದ್ ಅವರಿಗೆ ವೈದ್ಯರತ್ನ, ಪದ್ಮಶ್ರೀ ಪುರಸ್ಕೃತ ಅಂಕೇಗೌಡರಿಗೆ ಪುಸ್ತಕ ರತ್ನ, ಜನಪದ ಗಾಯಕ ಶಿವಾರ ಉಮೇಶ್ ಅವರಿಗೆ ಕಲಾರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.
ಪಿಇಟಿ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ವಿಜಯಾನಂದ, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಅಶೋಕ್ ಜಯರಾಂ, ಮನ್‌ಮುಲ್ ಅಧ್ಯಕ್ಷ ಶಿವಪ್ಪ ಉಮ್ಮಡಹಳ್ಳಿ, ಮನ್‌ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರು, ನಗರಸಭೆ ಮಾಜಿ ಅಧ್ಯಕ್ಷರಾದ ಎಚ್.ಎಸ್.ಮಂಜು ಮತ್ತು ನಾಗೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ವಿವರಿಸಿದರು.
ಬಳಗದ ಪದಾಧಿಕಾರಿಗಳಾದ ಶಶಿಧರ್, ಅಶೋಕ್, ಸೋಮು, ಕೃಷ್ಣೇಗೌಡ ಇದ್ದರು.