ಮಂಡ್ಯದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅಧ್ಯಕ್ಷತೆಯಲ್ಲಿ ಜಿಲ್ಲಾ ಗ್ರಂಥಾಲಯ ಸಮಿತಿ ಸಭೆ ಆಯೋಜಿಸಲಾಗಿತ್ತು.
- ಜಿಲ್ಲಾ ಗ್ರಂಥಾಲಯ ಸಮಿತಿ ಸಭೆ
- ಮುಖ್ಯ ಗ್ರಂಥಾಲಯ ಅಧಿಕಾರಿ ನಾರಾಯಣಮೂರ್ತಿ ಸೇರಿದಂತೆ ಹಲವರು ಭಾಗಿ
ಮಂಡ್ಯ: ಓದುಗರ ಆಸಕ್ತಿ ಮತ್ತು ಬೇಡಿಕೆಗೆ ಅನುಗುಣವಾಗಿ ಪುಸ್ತಕ ಆಯ್ಕೆ ಮಾಡುವುದು ಒಂದು ಉತ್ತಮ ನಿರ್ಧಾರ. ಗ್ರಂಥಾಲಯದಲ್ಲಿ ಈ ರೀತಿಯ ಪುಸ್ತಕ ಖರೀದಿ ಮಾಡಿ ಸಂಗ್ರಹವನ್ನು ಉತ್ತಮಪಡಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಗ್ರಂಥಾಲಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 587 ಪುಸ್ತಕ ಖರೀದಿ ಮಾಡಲು ಸಮಿತಿಯಿಂದ ತೀರ್ಮಾನ ಮಾಡಲಾಗಿದೆ. ಅದರಂತೆ ಉತ್ತಮ ಅಭಿರುಚಿವುಳ್ಳ ಪುಸ್ತಕ ಖರೀದಿ. ಗ್ರಂಥಾಲಯದಲ್ಲಿ ಓದುಗರ ನೋಂದಣಿಯನ್ನು ಹೆಚ್ಚಿಸಿ ಎಂದರು.
ಪ್ರಸ್ತುತ ಹೆಚ್ಚು ಮಾರಾಟವಾಗುತ್ತಿರುವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕೃತಿಗಳ ಪುಸ್ತಕ, ಆಸಕ್ತಿದಾಯಕ ಬರಹಗಳಿಗೆ ಆದ್ಯತೆ ನೀಡಿ. ಓದುಗರಿಗೆ ಆಕರ್ಷಕವಾದ ಮತ್ತು ಸುಸಜ್ಜಿತವಾದ ಅಧ್ಯಯನ ಕೊಠಡಿಗಳು, ಕುಡಿಯುವ ನೀರು ಮತ್ತು ಶೌಚಾಲಯದಂತಹ ಸೌಲಭ್ಯಗಳನ್ನು ಒದಗಿಸಲು ಅಗತ್ಯ ಕ್ರಮವಹಿಸಿ ಎಂದು ತಿಳಿಸಿದರು.
ಸಭೆಯಲ್ಲಿ ಮುಖ್ಯ ಗ್ರಂಥಾಲಯ ಅಧಿಕಾರಿ ನಾರಾಯಣಮೂರ್ತಿ, ಹಿರಿಯ ಸಾಹಿತಿಗಳಾದ ತೈಲೂರು ವೆಂಕಟಕೃಷ್ಣ, ರಾಜು ಇತರರಿದ್ದರು.