ಹುದ್ದೆ ನೇಮಕಕ್ಕೆ ನೇರ ಸಂದರ್ಶನ 
ಮಂಡ್ಯ

615 ಹುದ್ದೆ ನೇಮಕಕ್ಕೆ ಸಂದರ್ಶನ: ಮಾ.24ರಂದು ನಗರದಲ್ಲಿ ಆಯೋಜನೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಮೂರು ಕಂಪನಿಯಲ್ಲಿ ಖಾಲಿ ಇರುವ ಹುದ್ದೆ
  • 100 ವರ್ಕ್ ಫ್ರಂ ಹೋಂ ಹುದ್ದೆಗೆ ನೇಮಕಾತಿ
ಮಂಡ್ಯ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಪಿ.ಎಸ್.ಎನ್ ಸಪ್ಲೆಚೈನ್ ಸಲ್ಯೂಷನ್ಸ್ ಲಿಮಿಟೆಡ್, ಸ್ವತಂತ್ರ ಮೈಕ್ರೋ ಫೈನಾನ್ಸ್ ಮತ್ತು ಅವಧೂತ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ 615 ಹುದ್ದೆ ನೇಮಕಾತಿಗೆ ಆಯ್ಕೆ ಮಾಡಿಕೊಳ್ಳಲು ಮಾ.24ರಂದು ನೇರ ಸಂದರ್ಶನ ಆಯೋಜಿಸಲಾಗಿದೆ.
ಪಿ.ಎಸ್.ಎನ್ ಸಪ್ಲೆಚೈನ್ ಸಲ್ಯೂಷನ್ಸ್ ಲಿಮಿಟೆಡ್‌ನಲ್ಲಿ ಆಪರೇಟರ್ ಮತ್ತು ಟೆಕ್ನಿಕಲ್ ಅಸೋಸಿಯೆಟ್ 500 ಹುದ್ದೆ ಖಾಲಿ ಇದೆ. ಎಸ್‌ಎಸ್‌ಎಲ್ಸಿ, ಪಿಯುಸಿ ಹಾಗೂ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವ 18 ರಿಂದ 30 ವರ್ಷದೊಳಗಿನ ಮಹಿಳಾ ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗುವುದು. ಮಾಸಿಕ 18 ಸಾವಿರ ರೂ. ವೇತನದ ಜತೆಗೆ ಇತರೆ ಭತ್ಯೆ ಸಿಗಲಿದೆ. ಸ್ವತಂತ್ರ ಮೈಕ್ರೋ ಫೈನಾನ್ಸ್‌ನಲ್ಲಿ ಖಾಲಿ ಇರುವ 15 ಫೀಲ್ಡ್ ಆಫೀಸರ್ಸ್‌ಗೆ ಎಸ್‌ಎಸ್‌ಎಲ್ಸಿ, ಪಿಯುಸಿ ಹಾಗೂ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವ 18 ರಿಂದ 35 ವರ್ಷದೊಳಗಿನವರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಆಯ್ಕೆಯಾದವರಿಗೆ ಮಾಸಿಕ 15 ರಿಂದ 18 ಸಾವಿರ ರೂ. ವೇತನದ ಜತೆಗೆ ಇತರೆ ಭತ್ಯೆ ನೀಡಲಾಗುವುದು. ಅವಧೂತ ಚಾರಿಟಬಲ್ ಟ್ರಸ್ಟ್‌ನಲ್ಲಿ 100 ವರ್ಕ್ ಫ್ರಂ ಹೋಂ ಹುದ್ದೆಗೆ ಎಸ್‌ಎಸ್‌ಎಲ್ಸಿ ಮೇಲ್ಪಟ್ಟ 18 ವರ್ಷ ತುಂಬಿದವರನ್ನು ನೇಮಿಸಲಾಗುವುದು. ಹುದ್ದೆಗೆ ಅವಲಂಬಿತವಾಗಿ ವೇತನ ಸಿಗಲಿದೆ.
ಅರ್ಹರು ಅಭ್ಯರ್ಥಿಗಳು ಅಂದು ಬೆಳಗ್ಗೆ 10ಗಂಟೆಗೆ ನಗರದ ಆರ್‌ಟಿಒ ಕಚೇರಿ ಎದುರಿನ ಉದ್ಯೋಗ ವಿನಿಮಯ ಕಚೇರಿಯಲ್ಲಿ ನಡೆಯುವ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದೆಂದು ಪ್ರಕಟಣೆ ತಿಳಿಸಿದೆ.