ಪಾಂಡವಪುರ ಪಟ್ಟಣದ ಡಾ.ರಾಜ್‌ಕುಮಾರ್ ವೃತ್ತದಲ್ಲಿ ವಾಹನಗಳಿಗೆ ಅನುಕೂಲವಾಗುವಂತೆ ಮಾರ್ಗಸೂಚಿ ಸೂಚನಾ ಫಲಕ ಹಾಕುವಂತೆ ಹಾಗೂ ರಸ್ತೆಗೆ ಸ್ಪೀಡ್ ಬ್ರೇಕರ್ ಅಳವಡಿಕೆ ಮಾಡುವಂತೆ ಒತ್ತಾಯಿಸಿ ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್ ನೇತೃತ್ವದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.ಲೋಕೇಶ್, ವಿಷ್ಣುವಿಠಲ್, ಚನ್ನಕೇಶವ, ಶ್ರೀನಿವಾಸ್, ಮಧುಸೂದನ್ ಇತರರು ಇದ್ದರು.
- ಡಾ.ರಾಜ್‌ಕುಮಾರ್ ವೃತ್ತದಲ್ಲಿ ಪ್ರತಿಭಟನೆ
ಪಾಂಡವಪುರ: ಪಟ್ಟಣದ ಡಾ.ರಾಜ್‌ಕುಮಾರ್ ವೃತ್ತ(ಮಂಡ್ಯ ಸರ್ಕಲ್)ನಲ್ಲಿ ವಾಹನಗಳಿಗೆ ಅನುಕೂಲವಾಗುವಂತೆ ಮಾರ್ಗಸೂಚಿ ಸೂಚನಾ ಫಲಕ ಹಾಗೂ ರಸ್ತೆಗೆ ಸ್ಪೀಡ್ ಬ್ರೇಕರ್ ಅಳವಡಿಕೆಗೆ ಒತ್ತಾಯಿಸಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಡಾ.ರಾಜ್‌ಕುಮಾರ್ ವೃತ್ತದಲ್ಲಿ ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್ ನೇತೃತ್ವದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
ಶ್ರೀರಂಗಪಟ್ಟಣ-ಜೇವರ್ಗಿ ಮುಖ್ಯರಸ್ತೆ ಪಟ್ಟಣದ ಮಧ್ಯಭಾಗದಲ್ಲಿ ಹಾದುಹೋಗುವುದರಿಂದ ಮಂಡ್ಯ ಸರ್ಕಲ್‌ನಲ್ಲಿ ಮಾರ್ಗಸೂಚಿ ಸೂಚನಾ ಫಲಕ ಹಾಕಿಲ್ಲ. ಪರಿಣಾಮ ಮೈಸೂರು ಕಡೆಯಿಂದ ಬರುವ ಬಾರಿ ವಾಹನಗಳ ನೇರವಾಗಿ ಕಿರಿದಾಗಿರುವ ಹಳೇ ನಾಗಮಂಗಲ ರಸ್ತೆಯಲ್ಲಿ ಹೋಗಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ಹೇಳಿದರೆ ನಿರ್ಲಕ್ಷೃ ತೋರುತ್ತಿದ್ದಾರೆ. ಕಳೆದ ಬಾರಿ ಪ್ರತಿಭಟನೆ ನಡೆಸಿದ್ದ ವೇಳೆ ಜೂ.25ರೊಳಗೆ ಅಳವಡಿಸುವ ನೀಡಿದ್ದರು. ಆದರೆ, ಜುಲೈ ಬಂದರೂ ಮಾರ್ಗಸೂಚಿ ನಾಮಫಲಕ ಅಳವಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಸತೀಶ್ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಆಲಿಸಿದರು.
ಶ್ರೀರಂಗಪಟ್ಟಣ-ಜೇವರ್ಗಿ ಮುಖ್ಯರಸ್ತೆಯಲ್ಲಿ ಹೆಚ್ಚು ವಾಹನಗಳು ಓಡಾಡುತ್ತವೆ. ರಸ್ತೆಯಲ್ಲಿ ಸ್ಪೀಡ್‌ಬ್ರೇಕರ್ ಹಾಕದೆ ಇರುವುದರಿಂದ ಹೆಚ್ಚು ಅಪಘಾತವಾಗುತ್ತಿವೆ. ಹಾಗಾಗಿ ಹಿರೇಮರಳಿ ಗೇಟ್, ಮಂಡ್ಯ ಸರ್ಕಲ್, ಹರಳಹಳ್ಳಿ ಬಳಿ ರಸ್ತೆಗೆ ಸ್ಪೀಡ್‌ಬ್ರೇಕರ್ ಅಳವಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಈ ವೇಳೆ ಒಂದು ವಾರದೊಳಗೆ ಸೂಚನಾ ಫಲಕ ಅಳವಡಿಸುವುದಾಗಿ ಪುರಸಭೆ ಮುಖ್ಯಾಧಿಕಾರಿ ಸತೀಶ್ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಲೋಕೇಶ್, ವಿಷ್ಣುವಿಠಲ್, ಚನ್ನಕೇಶವ, ಶ್ರೀನಿವಾಸ್, ಮಧುಸೂದನ್ ಇತರರು ಇದ್ದರು.