ರೈತರು ಮತ್ತು ಕೂಲಿಕಾರರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಸಿಪಿಐ (ಎಂ) ಕಾರ್ಯಕರ್ತರು ಮದ್ದೂರು ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಶಿವಕುಮಾರ್ ಬಿರಾದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಬಿ.ಹನುಮೇಶ್, ಭರತ್‌ರಾಜ್, ಶೋಭಾ, ಲತಾ, ಸಿ.ಪ್ರದೀಪ್ ಇತರರಿದ್ದರು. 
ಮಂಡ್ಯ

ಎರಡು ಸಾವಿರ ಕೋಟಿ ಬರ ಪರಿಹಾರ ನೀಡಲು ಒತ್ತಾಯ

ಲಲಾಟಾಕ್ಷ ಎಸ್
ಮದ್ದೂರು: ಬರಪೀಡಿತ ಮಂಡ್ಯ ಜಿಲ್ಲೆಗೆ 2 ಸಾವಿರ ಕೋಟಿ ರೂ. ಬರ ಪರಿಹಾರ ನೀಡಬೇಕು. ರೈತರು ಮತ್ತು ಕೂಲಿಕಾರರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐಎಂ)ದಿಂದ ನಗರದ ತಾಲೂಕು ಕಚೇರಿ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಸಿಪಿಐ(ಎಂ) ಜಿಲ್ಲಾ ಸಮಿತಿ ಕಾರ್ಯದರ್ಶಿ ಮಂಡಳಿ ಸದಸ್ಯ ಬಿ.ಹನುಮೇಶ್ ಮಾತನಾಡಿ, ಬರಪೀಡಿತ ಎಂದು ಘೋಷಿತವಾಗಿರುವ ಮಂಡ್ಯ ಜಿಲ್ಲೆಗೆ ಕಾವೇರಿ ನೀರಿನ ಕೊರತೆ ಮತ್ತು ಬರ ನಿರ್ವಹಣೆ ಮಾಡಲು ಜಿಲ್ಲೆಗೆ 2 ಸಾವಿರ ಕೋಟಿ ರೂ.ಅನುದಾನ ನೀಡಬೇಕು. ರೈತರಿಗೆ ಬೆಳೆ ನಷ್ಟಕ್ಕೆ ಎಕರೆಗೆ 50 ಸಾವಿರ ರೂ.ಪರಿಹಾರ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ಕುಟುಂಬಕ್ಕೆ ವಾರ್ಷಿಕ 200 ದಿನ ಕೆಲಸ ನೀಡಬೇಕು. ದಿನಗೂಲಿಯನ್ನು 700 ರೂ.ಗೆ ಹೆಚ್ಚಿಸಬೇಕು. ಜಿಲ್ಲೆಯ ಎಲ್ಲ ರೈತರು, ಕೂಲಿಕಾರರು ಮೈಕ್ರೋ ಫೈನಾನ್ಸ್‌ಗಳಲ್ಲಿ ಮಾಡಿರುವ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ನಂತರ ತಹಸೀಲ್ದಾರ್ ಶಿವಕುಮಾರ್ ಬಿರಾದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಸಿಪಿಐಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ಮಂಡಳಿ ಸದಸ್ಯ ಭರತ್ ರಾಜ್, ಮುಖಂಡರಾದ ಸಿ.ಪ್ರದೀಪ್, ಹೊನ್ನಯ್ಯ, ಈರೇಗೌಡ, ರೇಖಾ, ಸಂಪತ್‌ಕುಮಾರ್, ಶೋಭಾ, ಸಿದ್ದೇಗೌಡ, ಅನಿತಾ, ಮಂಜೇಗೌಡ, ಗೌರಮ್ಮ, ಚೆನ್ನಮ್ಮ, ಪುಟ್ಟತಾಯಮ್ಮ ಮಹದೇವಮ್ಮ, ಭಾಗ್ಯಮ್ಮ, ಲಿಂಗಮ್ಮ, ಚೆನ್ನಾಜಮ್ಮ ಇದ್ದರು.