ಭಾರತೀ ಎಜುಕೇಷನ್ ಟ್ರಸ್ಟ್‌ನಿಂದ ವಿವಿಧ ಅಂಗ ಸಂಸ್ಥೆಗಳ ಸಹಯೋಗದೊಂದಿಗೆ ಸೋಮವಾರ ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ಕಾರ್ಯಕ್ರಮದಲ್ಲಿ ಸಿ.ಎಂ.ಶ್ರೀಧರ್ ಅವರನ್ನು ಅಭಿನಂದಿಸಲಾಯಿತು. ಜಿ.ಮಾದೇಗೌಡ, ಡಾ.ಚಂದನ್, ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರಿದ್ದರು. ----------
- ಭಾರತೀ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಬಿ.ಎಂ. ನಂಜೇಗೌಡ ಅಭಿಪ್ರಾಯ
ಕೆ.ಎಂ.ದೊಡ್ಡಿ : ಗಣರಾಜ್ಯೋತ್ಸವವು ಏಕತೆ, ಸಂವಿಧಾನಿಕ ಮೌಲ್ಯಗಳು ಮತ್ತು ದೇಶಭಕ್ತಿಯನ್ನು ಒತ್ತಿ ಹೇಳುತ್ತದೆ ಎಂದು ಭಾರತೀ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಬಿ.ಎಂ. ನಂಜೇಗೌಡ ಅಭಿಪ್ರಾಯಪಟ್ಟರು.
ಇಲ್ಲಿನ ಭಾರತೀ ಎಜುಕೇಷನ್ ಟ್ರಸ್ಟ್‌ನಿಂದ ವಿವಿಧ ಅಂಗ ಸಂಸ್ಥೆಗಳ ಸಹಯೋಗದೊಂದಿಗೆ ಸೋಮವಾರ ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಜಗತ್ತಿಗೆ ಸಂಸ್ಕೃತಿ, ಸಂಸ್ಕಾರ ನೀಡಿದ ದೇಶ ನಮ್ಮದು. ಭಾರತವು ಅನೇಕ ಭಾಷೆಗಳು, ಸಂಸ್ಕೃತಿಗಳು ಮತ್ತು ಸಂಪ್ರದಾಯಗಳನ್ನು ಹೊಂದಿರುವ ದೇಶ ಎಂಬುದು ಹೆಮ್ಮೆಯ ಸಂಗತಿ ಎಂದರು.
ಅಭಿನಂಧನೆ ಸ್ವೀಕರಿಸಿದ ಮಾಜಿ ಸೈನಿಕ ಸಿ. ಎಂ. ಶ್ರೀಧರ್ ಮಾತನಾಡಿ, ಭಾರತ ದೇಶ ಆರ್ಥಿಕ ವ್ಯವಸ್ಥೆ ಕುಗ್ಗಲು ಬ್ರಿಟಿಷ್ ಆಡಳಿತವೇ ಕಾರಣ, ಜಾತಿ ವ್ಯವಸ್ಥೆ, ಧರ್ಮ ರಾಜಕರಣ, ಅಧಿಕಾರದ ದಾಹ ಹೀಗೆ ಹಲವಾರು ಕಾರಣಗಳಿಂದ ಭಾರತ ಹಿನ್ನಡೆ ಅನುಭವಿಸುತ್ತಿದ್ದರೂ ಪ್ರಸ್ತುತ ದಿನಗಳಲ್ಲಿ ಆರ್ಥಿಕ ವ್ಯವಸ್ಥೆಯಿಂದ ಚೇತರಿಕೆ ಕಂಡಿದೆ. ಜಿಡಿಪಿ ವ್ಯವಸ್ಥೆ ಮೇಲ್ಮುಖವಾಗಿ ಭಾರತ ಅಭಿವೃದ್ಧಿಯತ್ತ ಮುಖ ಮಾಡಿದೆ ಎಂದು ಶ್ಲಾಘಿಸಿದರು.
ಈವೇಳೆ ಕ್ರೀಡೆ, ಶೈಕ್ಷಣಿಕ, ಕಲೆ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಭಾರತೀ ವಿದ್ಯಾ ಸಂಸ್ಥೆಯ ನೌಕರರು ವಿವಿಧ ವಿಶ್ವವಿದ್ಯಾಲಯದ ಮೂಲಕ ಪಿಎಚ್.ಡಿ ಪಡೆದ ಭಾರತೀ ಕಾಲೇಜಿನ ಡಾ.ಅಂಜೇಶ್, ಪದ್ಮಾ ಜಿ.ಮಾದೇಗೌಡ, ನರ್ಸಿಂಗ್ ಕಾಲೇಜಿನ ಡಾ. ಎಚ್. ಸೌಮ್ಯಾ, ಜಿ.ಮಾದೇಗೌಡ ತಾಂತ್ರಿಕ ಮಹಾವಿದ್ಯಾಲಯದ ಡಾ. ಬಿ. ಆರ್.ವಿದ್ಯಾ, ಭಾರತೀ ಫಾರ್ಮಸಿ ಕಾಲೇಜಿನ ಡಾ. ಟಿ. ರಶ್ಮಿ ಅವರನ್ನು ಸಂಸ್ಥೆ ವತಿಯಿಂದ ಅಭಿನಂದಿಸಲಾಯಿತು.
ಕಾರ್ಯಕ್ರಮದ ಸಂಯೋಜಕ ಜಿ.ಮಾದೇಗೌಡ, ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಚಂದನ್, ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರಾದ ಡಾ.ಎಂ.ಎಸ್. ಮಹದೇವಸ್ವಾಮಿ, ಡಾ.ಎಸ್.ಎಲ್.ಸುರೇಶ್, ಡಾ. ತಮಿಜ್‌ಮಣಿ, ಡಾ. ಬಾಲಸುಬ್ರಮಣ್ಯಂ, ಡಾ. ಶಾಂತರಾಜು, ಮಂಜು ಜೇಕಬ್, ಜಗದೀಶ್, ಡಾ. ಮಹೇಶ್‌ಲೋನಿ, ಜಿ. ಕೃಷ್ಣ, ಸಿ.ವಿ. ಮಲ್ಲಿಕಾರ್ಜುನ, ಪಿ. ರಾಜೇಂದ್ರ ರಾಜೇ ಅರಸ್, ಸಿ. ರಮ್ಯಾ, ಎನ್‌ಸಿಸಿ ಲೆಫ್ಟಿನೆಟ್ ಸಿ.ಮಲ್ಲೇಶ್ ಸೇರಿದಂತೆ ಹಲವರಿದ್ದರು.