ರೈತ ಸುಂದರ್ ಅವರಿಗೆ ಸೇರಿದ್ದ ತೋಟದಲ್ಲಇ ಆಕಸ್ಮಿಕ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಲಕ್ಷಾಂತರ ರೂ.ಬೆಲೆ ಬಾಳುವ ಬೆಳೆಗಳು ಬೆಂಕಿಗೆ ಆಹುತಿಯಾಗಿರುವುದು. 
ಮಂಡ್ಯ

ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಬೆಳೆ ನಾಶ

ಶಿವಶಂಕರ್ ಎಂ. ಹೆಬ್ಬಳ್ಳ

ಪ್ರಮುಖ ಮುಖ್ಯಾಂಶಗಳು

  • ಲಕ್ಷಾಂತರ ರೂ. ಮೌಲ್ಯದ ಬೆಳೆ ಬೆಂಕಿಗೆ ಆಹುತಿ
ಮದ್ದೂರು ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರೂ. ಮೌಲ್ಯದ  ಬೆಳೆ ಬೆಂಕಿಗೆ ಆಹುತಿಯಾಗಿದೆ.
ನಗರದ ಲೀಲಾವತಿ ಬಡಾವಣೆಯ ನಿಸಾಸಿ ಹಾಗೂ ರೈತ ಸುಂದರ್ ಅವರ ಬೆಳೆಗಳಾಗಿದ್ದು, ಭಾನುವಾರ ಸಂಜೆ ಈ ಘಟನೆ ನಡೆದಿರುವುದರಿಂದ ಇಡೀ ರಾತ್ರಿ ಬೆಂಕಿ ಪಸರಿಸಿ ಹಲವಾರು ವರ್ಷಗಳಿಂದ ಯಾವುದೇ ರಾಸಾಯನಿಕ ಗೊಬ್ಬರ ಬೆಳೆಸಿದ್ದ ತೆಂಗು, ಅಡಕೆ, ಮೆಣಸು, ಸೀಬೆ, ಸಪೋಟ, ಹಲಸು, ಹೂವು, ತರಕಾರಿ, ಅಲಂಕಾರಿಕ ಗಿಡಗಳು ಬೆಂಕಿಗೆ ಆಹುತಿಯಾಗಿವೆ. 
ತೋಟದಲ್ಲಿ ವಿದ್ಯುತ್ ತಂತಿ ಹಾಗೂ ಕಂಬಗಳು ಎಳೆದಿರುವುದರಿಂದ ವಿದ್ಯುತ್ ಕಂಬಗಳಲ್ಲಿ ವಿದ್ಯುತ್ ಶಾರ್ಟ್‌ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡು ಈ ಘಟನೆ ಸಂಭವಿಸಿದೆ. ವಿದ್ಯುತ್ ತಂತಿ ಮತ್ತು ಕಂಬಳನ್ನು ತೆರವುಗೊಳಿಸಿ ಬೇರೆ ಕಡೆ ಹಾಕುವಂತೆ ಹಲವಾರು ಬಾರಿ ಸೆಸ್ಕ್ ಅಧಿಕಾರಿಗಳಿಗೆ ಮನವಿ ಮಾಡಿದ್ದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತ ಸುಂದರ್ ಆರೋಪಿಸಿದರು. ಈ ಕೂಡಲೇ ತೋಟದಲ್ಲಿರುವ ವಿದ್ಯುತ್ ತಂತಿ ಮತ್ತು ಕಂಬಗಳನ್ನು ಬದಲಾವಣೆ ಮಾಡಬೇಕು ಹಾಗೂ ನಾಶವಾಗಿರುವ ಬೆಳೆಗಳಿಗೆ ವೈಜ್ಞಾನಿಕ ಬೆಲೆಯನ್ನು ಸರ್ಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.