ಮಳವಳ್ಳಿ: ಅಪ್ರಾಪ್ತ ಬಾಲಕನಿಗೆ ಬೈಕ್ ಚಾಲನೆಗೆ ನೀಡಿದ ಮಾಲೀಕನಿಗೆ ಮಳವಳ್ಳಿ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರು ದಂಡ ಸಹಿತ 3 ದಿನಗಳ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.
ತಾಲೂಕಿನ ಕಿರುಗಾವಲು ಹೋಬಳಿಯ ಚನ್ನಪಿಳ್ಳೆ ಕೊಪ್ಪಲು ಗ್ರಾಮದ ಬೀರಯ್ಯ ಎಂಬಾತ ಬಾಲಕನಿಗೆ ಬೈಕ್ ನೀಡಿ ಶಿಕ್ಷೆಗೆ ಗುರಿಯಾಗಿದ್ದಾರೆ. ಇವರು 2020 ನವೆಂಬರ್‌ನಲ್ಲಿ ಮಳವಳ್ಳಿ-ಮೈಸೂರು ಮುಖ್ಯ ರಸ್ತೆಯಲ್ಲಿ ಅಪ್ರಾಪ್ತ ಬಾಲಕನಿಗೆ ಬೈಕನ್ನು ನೀಡಿದ್ದರು. ಆತ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಗ್ರಾಮಾಂತರ ಪೊಲೀಸರು ತಪಾಸಣೆ ವೇಳೆ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ರಕರಣದ ಸಂಬಂಧ ವಾದ ಆಲಿಸಿದ್ದ ಪಟ್ಟಣದ ಜೆಎಂಎಫ್ ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಮಹೇಂದ್ರ, ಬೈಕ್ ಮಾಲೀಕ ಬೀರಯ್ಯನಿಗೆ 25 ಸಾವಿರ ರೂ. ದಂಡ ಹಾಗೂ ಮೂರು ದಿನಗಳ ಸಾಧಾರಣ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ಈಗಾಗಲೇ ಬೀರಯ್ಯ 2025ರ ಜುಲೈನಲ್ಲಿ ಮೂರು ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಹಿನ್ನೆಲೆಯಲ್ಲಿ ದಂಡ ಪಾವತಿಗೆ ಮಾತ್ರ ಆದೇಶಿಸಿರುವ ನ್ಯಾಯಾಧೀಶರು, ದಂಡ ಪಾವತಿ ವಿಫಲರಾದರೆ 22 ದಿನಗಳ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.