ಶ್ರೀರಂಗಪಟ್ಟಣ ತಾಲೂಕು ಕೆ.ಶೆಟ್ಟಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆ, ಅಂತಾರಾಷ್ಟ್ರೀಯ ಅಗ್ನಿಶಾಮಕ ಅಭಿಯಾನ ದಿನ, ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. 
ಮಂಡ್ಯ

ಸಮಾಜದ ಒಳಿತಿಗೆ ಶ್ರಮಿಸುವವರಿಗೆ ಸಹಕಾರ ಅಗತ್ಯ

ಶ್ರೀರಂಗಪಟ್ಟಣ: ಸಮಾಜದಲ್ಲಿ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಪೌರಕಾರ್ಮಿಕರು, ಅಗ್ನಿಶಾಮಕ ಸಿಬ್ಬಂದಿ, ಪತ್ರಕರ್ತರ ಸೇವೆಯನ್ನು ಎಲ್ಲರೂ ಗೌರವಿಸಬೇಕು ಎಂದು ಐಕ್ಯ ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ ಅಧ್ಯಕ್ಷೆ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಆಶಾಲತಾ ಪುಟ್ಟೇಗೌಡ ತಿಳಿಸಿದರು.
ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಕೆ.ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ, ಐಕ್ಯ ಅಲಯನ್ಸ್ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆ, ಅಂತಾರಾಷ್ಟ್ರೀಯ ಅಗ್ನಿಶಾಮಕ ಅಭಿಯಾನ ದಿನ, ವಿಶ್ವ ಪತ್ರಿಕಾ ಸ್ವಾತಂತ್ರೃ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸುಂದರ ಪರಿಸರ ಹಾಗೂ ಜನರಿಗೆ ಸುಸ್ಥಿರ ಆರೋಗ್ಯಕ್ಕಾಗಿ ತಮ್ಮ ಆರೋಗ್ಯ ಮುಡಿಪಿಟ್ಟು ಶ್ರಮಿಸುವ ಪೌರಕಾರ್ಮಿಕ ಸೇವೆ ಎಂದಿಗೂ ಅನ್ಯನ್ಯ. ಅವರನ್ನು ಪೌರಕಾರ್ಮಿಕರು ಎನ್ನುವುದಕ್ಕಿಂತ ಪ್ರಜಾ ರಕ್ಷಕರು ಎನ್ನಬಹುದು. ತುರ್ತು ಪರಿಸ್ಥಿತಿಯಲ್ಲಿ ಪ್ರಾಣದ ಹಂಗು ತೊರೆದು ಕಾರ್ಯನಿರ್ವಹಿಸುವ ಅಗ್ನಿಶಾಮಕ ಸಿಬ್ಬಂದಿ ಕಾರ್ಯ ಶ್ಲಾಘನೀಯ. ಸಮಾಜದ ಒಳಿತಿಗೆ ಶ್ರಮಿಸುವ ಪತ್ರಕರ್ತರು ನಿರ್ಭೀತರಾಗಿ ಕಾರ್ಯನಿರ್ವಹಿಸಲು ಸಮಾಜ ಬೆನ್ನಾಗಿ ನಿಲ್ಲಬೇಕು ಎಂದರು.
ಕೆ.ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಾ.ಶೋಭಾರಾಣಿ ಮಾತನಾಡಿ, ಸಮಾಜದ ಪ್ರತಿಯೊಬ್ಬ ಪ್ರಜೆಯೂ ಕಾರ್ಮಿಕ. ಸಮಾಜದ ಒಳಿತಿಗೆ ದುಡಿಯುವವರಿಗೆ ಸಹಕಾರ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.
ಐಕ್ಯ ಅಸೋಸಿಯೇಷನ್ ಪ್ರಾದೇಶಿಕ ಅಧ್ಯಕ್ಷೆ ಎನ್.ಸರಸ್ವತಿ, ರಂಗನಾಯಕಿ ಸಮಾಜದ ಅಧ್ಯಕ್ಷೆ ವಿಶಾಲಾಕ್ಷಿ, ಐಕ್ಯ ಅಸೋಸಿಯೇಷನ್ ಸಂಸ್ಥೆ ಕಾರ್ಯದರ್ಶಿ ಅನುಪಮಾ, ಸದಸ್ಯರಾದ ಸವಿತಾ, ಗೀತಾ, ಲಕ್ಷ್ಮೀದೇವಿ, ಶಿವಕುಮಾರ್, ಸೋಮಶೇಖರ್, ಕೂಡಲ ಕುಪ್ಪೆ ಗೋಪಾಲಗೌಡ, ಚಲನಚಿತ್ರ ನಿರ್ದೇಶಕ ಎಚ್.ವಿ.ಪುಟ್ಟಸ್ವಾಮಿ ಉಪಸ್ಥಿತರಿದ್ದರು.