ಮಂಡ್ಯ ನಗರದ ದಿ ರೈಲ್ವೆ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಸಹಕಾರ ಪಿತಾಮಹ ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲರ ಜಯಂತಿ ಆಚರಿಸಲಾಯಿತು. 
ಮಂಡ್ಯ

ಠೇವಣಿ ಸಂಗ್ರಹಿಸುವ ಮೈಲಿಗಲ್ಲಿನತ್ತ ಮುನ್ನಡೆ: ದಿ ರೈಲ್ವೆ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಬಿ.ಮಂಜೇಗೌಡ ಹೇಳಿಕೆ

ಮಂಡ್ಯ: ದಿ ರೈಲ್ವೆ ಕೋ ಆಪರೇಟಿವ್ ಬ್ಯಾಂಕ್ ಶೀಘ್ರದಲ್ಲಿ ಒಂದು ಸಾವಿರ ಕೋಟಿ ರೂ.ಗೂ ಅಧಿಕ ಠೇವಣಿ ಸಂಗ್ರಹದ ಮಹತ್ವದ ಮೈಲಿಗಲ್ಲು ಸಾಧಿಸುವತ್ತಾ ಮುನ್ನಡೆಯುತ್ತಿದೆ ಎಂದು ಬ್ಯಾಂಕ್ ಅಧ್ಯಕ್ಷ ಡಾ.ಎಂ.ಬಿ.ಮಂಜೇಗೌಡ ತಿಳಿಸಿದರು.
ಇಲ್ಲಿನ ಅಶೋಕನಗರದಲ್ಲಿರುವ ಬ್ಯಾಂಕ್ ಆವರಣದಲ್ಲಿ ಆಯೋಜಿಸಿದ್ದ ಸಹಕಾರ ಪಿತಾಮಹ ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಹಕಾರ ಚಳವಳಿಯನ್ನು ಬಲಪಡಿಸುವಲ್ಲಿ ಪಾಟೀಲರ ದೂರದೃಷ್ಟಿ ಹೊಂದಿದ್ದರು. ನಾಯಕತ್ವ ಮತ್ತು ಸೇವಾ ಮನೋಭಾವ ಇಂದಿಗೂ ಸಹಕಾರ ಕ್ಷೇತ್ರಕ್ಕೆ ಮಾರ್ಗದರ್ಶಕವಾಗಿದೆ ಎಂದು ತಿಳಿಸಿದರು.
ಉಪಾಧ್ಯಕ್ಷ ಡಾ.ಎಸ್.ಆನಂದ, ನಿರ್ದೇಶಕರಾದ ಹನುಮಂತ, ಎಂ.ಬಿ.ಯೋಗಾನಂದ, ಎಸ್.ಮುತ್ತುಕುಮಾರ್, ಆರ್.ಚಂದ್ರಶೇಖರ, ಯತಿರಾಜು, ರಾಮನಾದನ್, ಮಂಜುನಾಥ, ಶಿವಶಂಕರ್, ಉತ್ತೇಜ್, ಶ್ವೇತಾ, ನಿರ್ಮಲಾ, ಪಿ.ಚಂದ್ರಶೇಖರ್, ನಂದಕುಮಾರ್, ಸಿಇಒ ಎಸ್.ಜೆ.ನಾರಾಯಣ, ಜನರಲ್ ಮ್ಯಾನೇಜರ್ ಎಂ.ಸಿ.ಲಕ್ಷ್ಮೀಪ್ರಸಾದ್, ಸತ್ಯನಾರಾಯಣ ಇತರರಿದ್ದರು.