ಚನ್ನಪಟ್ಟಣದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಜೇತರಾದ ಗೊರವಾಲೆ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು.  
ಮಂಡ್ಯ

ಸ್ವ ರಕ್ಷಣೆಗೆ ಕರಾಟೆ ಅಗತ್ಯ: ಮುಖ್ಯಶಿಕ್ಷಕಿ ಯಮುನಾ ಅಭಿಮತ

ಪ್ರಮುಖ ಮುಖ್ಯಾಂಶಗಳು

  • ಚನ್ನಪಟ್ಟಣದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ
  • ಗೊರವಾಲೆ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಬಹುಮಾನ

ಮಂಡ್ಯ: ಸ್ವರಕ್ಷಣೆ ಮಾಡಿಕೊಳ್ಳಲು ಇಂದು ಕರಾಟೆ ಅತ್ಯಗತ್ಯವಾಗಿದೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಈ ಕರಾಟೆ ಬೇಕೇ ಬೇಕು. ಕಾರಣ ಇಂದು ವಿಶ್ವದಾದ್ಯಂತ ನಡೆಯುತ್ತಿರುವ ಹೆಣ್ಣು ಮಕ್ಕಳ ದೌರ್ಜನ್ಯವನ್ನು ತಡೆಗಟ್ಟಲು ತುಂಬಾ ಅವಶ್ಯಕ ಎಂದು ಗೊರವಾಲೆ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಯಮುನಾ ಹೇಳಿದರು.

ಇತ್ತೀಚಿಗೆ ಚನ್ನಪಟ್ಟಣದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯ ಕಟ ವಿಭಾಗದಲ್ಲಿ ಪ್ರಶಸ್ತಿಯನ್ನು ಜಯಿಸಿದಂತಹ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ಸರ್ಕಾರಿ ಶಾಲೆಗಳಲ್ಲಿನ ಹೆಣ್ಣು ಮಕ್ಕಳಿಗೆ ಕರಾಟೆಯನ್ನು ಉಚಿತವಾಗಿ ಕಲಿಸಿಕೊಡುವಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.

ದೈಹಿಕ ಶಿಕ್ಷಣ ಶಿಕ್ಷಕ ಕೆ.ಎಸ್.ರಾಮ ಸಂಜೀವಯ್ಯ, ಹನುಮಂತ ಪೂಜಾರಿ, ಮುತ್ಯಾಲಪ್ಪ, ನಾಗರಾಜು, ಮಂಜುಳಾ, ಶಂಕರ್, ತರಬೇತುದಾರ ನಾರಾಯಣ್ ಇತರರಿದ್ದರು. ಕರಾಟೆ ಸ್ಪರ್ಧೆಯಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಎಂ.ಎಸ್.ವರುಣ ಹಾಗೂ ಎಂಟನೇ ತರಗತಿ ವಿದ್ಯಾರ್ಥಿನಿ ಎಂ.ಇ.ಸಂಧ್ಯಾ ಪ್ರಥಮ ಸ್ಥಾನ ಪಡೆದರು. ನಯನಾ ಹಾಗೂ ಹರ್ಷಿತಾ ತೃತೀಯ ಸ್ಥಾನ ಪಡೆದಿದ್ದಾರೆ.