ನಾಗಮಂಗಲ ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಸಂಘದ ಸಭಾಂಗಣದಲ್ಲಿ ನಾಮನಿರ್ದೇಶಿತ ಸದಸ್ಯೆ ಗೀತಾದಾಸೇಗೌಡ ಅವರನ್ನು ಸಂಘದ ಆಡಳಿತ ಮಂಡಳಿಯಿಂದ ಅಭಿನಂದಿಸಲಾಯಿತು.  
ಮಂಡ್ಯ

ಟಿಎಪಿಸಿಎಂಎಸ್ ನಾಮನಿರ್ದೇಶಿತ ಸದಸ್ಯೆಗೆ ಅಭಿನಂದನೆ

ಮಾದೇಶ್ ತಿ.ನರಸೀಪುರ
ನಾಗಮಂಗಲ: ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಸಂಘಕ್ಕೆ ಸರ್ಕಾರದಿಂದ ನಾಮನಿರ್ದೇಶಿತ ಸದಸ್ಯರಾಗಿ ನೇಮಕವಾಗಿರುವ ಕಾಂಗ್ರೆಸ್‌ನ ಗೀತಾ ದಾಸೇಗೌಡ ಅವರನ್ನು ಸಂಘದ ಆಡಳಿತ ಮಂಡಳಿಯಿಂದ ಮಂಗಳವಾರ ಅಭಿನಂದಿಸಲಾಯಿತು.
ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಸಂಘದ ಸಭಾಂಗಣದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಗೀತಾದಾಸೇಗೌಡ, ಪಕ್ಷಕ್ಕಾಗಿ ದುಡಿದಿರುವುದನ್ನು ಗುರುತಿಸಿ ನನಗೆ ಈ ಜವಾಬ್ದಾರಿ ನೀಡಿದೆ. ಸರ್ಕಾರ ನೀಡಿರುವ ಈ ಅಧಿಕಾರವನ್ನು ರೈತಪರವಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಮೂಲಕ ಕೃತಜ್ಞತೆ ಸಲ್ಲಿಸುವ ಕೆಲಸ ಮಾಡುತ್ತೇನೆ. ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.
ಸಂಘದ ಅಧ್ಯಕ್ಷ ಪ್ರಕಾಶ್, ಸದಸ್ಯರಾದ ದಿನೇಶ್, ಕೃಷ್ಣೇಗೌಡ, ಉಜ್ವಲ, ಕೃಷ್ಣಮೂರ್ತಿ, ಲಕ್ಷ್ಮಣ್ ಇತರರು ಇದ್ದರು.