ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ತಾಜಲ್ ಇಸ್ಲಾಂ ಮುಸ್ಲಿಂ ಜಮಾತ್ ಆಡಳಿತ ಮಂಡಳಿ ಸದಸ್ಯರು ಎಮ್ಮೆಮಾಡು ಉರುಸ್ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.
ನಾಪೋಕ್ಲು: ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಉರುಸ್ ಕಾರ್ಯಕ್ರಮಕ್ಕೆ ಜಮಾತ್ ಆಡಳಿತ ಮಂಡಳಿ ಪದಾಧಿಕಾರಿಗಳು ಮುಖ್ಯಮಂತ್ರಿ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಆಹ್ವಾನಿಸಿದ್ದಾರೆ.
ಎಮ್ಮೆಮಾಡುವಿನಲ್ಲಿ ಪ್ರತಿ ವರ್ಷ ನಡೆಯುವ ಉರುಸ್ ಕಾರ್ಯಕ್ರಮಕ್ಕೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕೃತವಾಗಿ ಅವರ ಕಚೇರಿಯಲ್ಲಿ ಆಹ್ವಾನಿಸಲಾಯಿತು. ಮುಖ್ಯಮಂತ್ರಿ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರ ನೇತೃತ್ವದಲ್ಲಿ, ತಾಜಲ್ ಇಸ್ಲಾಂ ಮುಸ್ಲಿಂ ಜಮಾತ್ ಅಧ್ಯಕ್ಷ ಕೆ.ಎಂ.ಹುಸೇನ್ ಸಖಾಫಿ, ಮಾಜಿ ಅಧ್ಯಕ್ಷ ಅಬೂಬಕರ್ ಸಖಾಫಿ, ಆಡಳಿತ ಮಂಡಳಿ ಸದಸ್ಯರಾದ ಮೆನ್ ಮಹಮ್ಮದ್, ಹನೀಫ್ ಎಮ್.ಎ. ಹಾಗೂ ಧರ್ಮಗುರುಗಳು ಆಹ್ವಾನ ಪತ್ರಿಕೆಯನ್ನು ನೀಡಿ ಉರುಸ್ ಸಮಾರಂಭಕ್ಕೆ ಆಹ್ವಾನಿಸಿದರು.
ಎಮ್ಮೆಮಾಡು ಉರುಸ್ ಪ್ರಾಮುಖ್ಯತೆ ಬಗ್ಗೆ ಮುಖ್ಯಮಂತ್ರಿ ಅವರಿಗೆ ವಿವರಿಸಿದ ಶಾಸಕರು, ಸುಮಾರು 400 ವರ್ಷಕ್ಕೂ ಅಧಿಕ ಇತಿಹಾಸ ಇರುವ ಈ ಉತ್ಸವಕ್ಕೆ, ಕರ್ನಾಟಕ ಮಾತ್ರವಲ್ಲದೆ ನೆರೆಯ ರಾಜ್ಯಗಳಿಂದ ಎಲ್ಲ ಧರ್ಮದ ಭಕ್ತರು ಆಗಮಿಸಿ ಪ್ರಾರ್ಥಿಸುತ್ತಾರೆ ಎಂದು ವಿವರಿಸಿದರು.
ವಿಧಾನಸಭೆ ಸಭಾಪತಿ ಯು.ಟಿ.ಖಾದರ್, ಅಲ್ಪಸಂಖ್ಯಾತ ಸಚಿವ ಜಮೀರ್ ಅಹ್ಮದ್, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಝೀರ್ ಅಹಮದ್, ಶಾಂತಿನಗರ ಶಾಸಕ ಎನ್.ಎ.ಹ್ಯಾರೀಸ್ ಮತ್ತು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರನ್ನು ಆಹ್ವಾನಿಸಲಾಯಿತು.