ಮಳವಳ್ಳಿ: ಪಟ್ಟಣದ ರೈತ ಸಮುದಾಯ ಭವನದಲ್ಲಿ ಜೆಡಿಎಸ್-ಬಿಜೆಪಿಯಿಂದ ಮಂಗಳವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರಿಗೆ ನುಡಿನಮನ ಹಮ್ಮಿಕೊಳ್ಳಲಾಗಿತ್ತು.
ಮಳವಳ್ಳಿ: ಪಟ್ಟಣದ ರೈತ ಸಮುದಾಯ ಭವನದಲ್ಲಿ ಜೆಡಿಎಸ್-ಬಿಜೆಪಿಯಿಂದ ಮಂಗಳವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರಿಗೆ ನುಡಿನಮನ ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ರೈತ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾಜಿ ಶಾಸಕರು, ಜಿಪಂ, ತಾಪಂ ಮಾಜಿ ಸದಸ್ಯರು, ಮುಖಂಡರು ಪಾಲ್ಗೊಂಡು ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಚನೆ ಮಾಡಿದರು.
ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ಏಳಿಗೆಗೆ ಸದಾ ಶ್ರಮಿಸಿದವರು. ದೇಶಕ್ಕೆ ಪ್ರಧಾನಿ ಹಾಗೂ ರಾಜ್ಯಕ್ಕೆ ಎರಡು ಬಾರಿ ಮುಖ್ಯಮಂತ್ರಿ ನೀಡಿದ ಕುಟುಂಬದ ಮಹಾನ್ ತಾಯಿಯಾಗಿದ್ದರೂ ಎಲ್ಲೂ ತಮ್ಮ ರಾಜಕೀಯ ಪ್ರಭಾವ ತೋರಿಸಿಕೊಳ್ಳದೆ ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾಗಿದ್ದರು ಎಂದು ಸ್ಮರಿಸಿದರು.
ಬಿಜೆಪಿ ರಾಜ್ಯ ರೈತಮೋರ್ಚಾ ಕಾರ್ಯದರ್ಶಿ ಎಚ್.ಆರ್.ಅಶೋಕ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಯಮದೂರು ಸಿದ್ದರಾಜು, ತಾಲೂಕು ಮಂಡಲ ಅಧ್ಯಕ್ಷ ಮಧುಗಂಗಾಧರ್, ಜೆಡಿಎಸ್ ಜಿಲ್ಲಾ ಯವ ಘಟಕದ ಅಧ್ಯಕ್ಷ ರವಿ ಕಂಸಾಗರ, ತಾಲೂಕು ಅಧ್ಯಕ್ಷ ಹನುಮಂತು, ಯುವ ಘಟಕದ ಅಧ್ಯಕ್ಷ ಚಂದಳ್ಳಿ ಶ್ರೀಧರ್, ಎಸ್ಸಿ-ಎಸ್ಟಿ ಅಧ್ಯಕ್ಷ ಬೆಳಕವಾಡಿ ಕಾಂತರಾಜು, ಟೌನ್ ಅಧ್ಯಕ್ಷ ಪ್ರಭು, ಮಹಿಳಾ ಘಟಕದ ಅಧ್ಯಕ್ಷೆ ಪದ್ಮಮ್ಮ, ಮುಖಂಡರಾದ ಟಿ.ನಂದಕುಮಾರ್, ಎಂ.ಪಿ.ಮಧು, ಮೆಹಬೂಬ್ ಪಾಷಾ ಉಪಸ್ಥಿತರಿದ್ದರು.