ಪಾಂಡವಪುರ ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಜನಗಣತಿ ತರಬೇತಿ ಕಾರ್ಯಾಗಾರಕ್ಕೆ ತಹಸೀಲ್ದಾರ್ ಬಸವರಡೆಪ್ಪ ರೋಣದ ಚಾಲನೆ ನೀಡಿದರು. ಪುರಸಭೆ ಮುಖ್ಯಾಧಿಕಾರಿ ಸತೀಶ್‌ಕುಮಾರ್, ಬಿಇಒ ಧರ್ಮಶೆಟ್ಟಿ ಇತರರು ಇದ್ದರು.
ಪಾಂಡವಪುರ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜನಗಣತಿ ತರಬೇತಿ ಕಾರ್ಯಾಗಾರಕ್ಕೆ ತಹಸೀಲ್ದಾರ್ ಬಸವರಡೆಪ್ಪ ರೋಣದ ಮಂಗಳವಾರ ಚಾಲನೆ ನೀಡಿದರು.
ಜನಗಣತಿಯು ಏ.16ರಿಂದ ಮೇ 15ರವರೆಗೆ ನಡೆಯಲಿದ್ದು, ಗಣತಿದಾರರಿಗೆ(ಶಿಕ್ಷಕ, ಶಿಕ್ಷಕಿಯರು) ಮೂರು ದಿನಗಳ ಕಾಲ ತರಬೇತಿ ನೀಡಲಾಗುವುದು. ಜಿಲ್ಲಾ ಮಟ್ಟದಲ್ಲಿ ಈಗಾಗಲೇ ತರಬೇತಿ ಪಡೆದಿರುವ ಮಾಸ್ಟರ್ ಟ್ರೈನರ್ಸ್‌ಗಳು ಗಣತಿದಾರರಿಗೆ ತರಬೇತಿ ನೀಡಲಿದ್ದಾರೆ. ಇದು ಮೊದಲ ಹಂತದ ಮನೆ ಪಟ್ಟಿ ಮತ್ತು ಮನೆ ಗಣತಿಯಾಗಿದೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ 281 ಶಿಕ್ಷಕ ಮತ್ತು ಶಿಕ್ಷಕಿಯರು ತರಬೇತಿ ಪಡೆಯುತ್ತಿದ್ದಾರೆ. ಜತೆಗೆ 16 ಸೂಪರ್‌ವೈಸರ್ ತರಬೇತಿಯಲ್ಲಿದ್ದಾರೆ. ಜನಗಣತಿಗಾಗಿ ಈಗಾಗಲೇ ಬ್ಲಾಕ್‌ಗಳ ನಕ್ಷೆ ಸಿದ್ಧಪಡಿಸಲಾಗಿದ್ದು, ನಕ್ಷೆ ಆಧಾರದ ಮೇಲೆ ಗಣತಿದಾರರು ಪ್ರತಿ ಮನೆ ಮನೆಗೆ ತೆರಳಿ ಮನೆ ಪಟ್ಟಿ ಮತ್ತು ಮನೆ ಗಣತಿ ನಡೆಸಲಿದ್ದಾರೆ. ಗಣತಿ ಯಶಸ್ಸಿಗಾಗಿ ಸಾಕಷ್ಟು ಸಿಬ್ಬಂದಿ ಶ್ರಮಿಸುತ್ತಿದ್ದು, ಇದಕ್ಕೆ ನಾಗರಿಕರು ಸಹಕಾರ ನೀಡಬೇಕು ಜತೆಗೆ ಮೊಬೈಲ್ ಮೂಲಕ ಸ್ವಯಂ ಗಣತಿ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್, ಬಿಇಒ ಧರ್ಮಶೆಟ್ಟಿ, ಮಹೇಶ್ ಇತರರು ಇದ್ದರು.