ಮದ್ದೂರು ನಗರದ ಶಿವಪುರದ ಹಳೆ ಕೊಪ್ಪ ವೃತ್ತದಲ್ಲಿ ಸಿದ್ಧ್ದಗಂಗಾ ಮಠದ ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿ 119ನೇ ಜಯಂತ್ಯುತ್ಸವ ಆಚರಿಸಲಾಯಿತು. ಭದ್ರಯ್ಯ, ಶಿವಕುಮಾರ್, ವಿಶ್ವನಾಥ್, ಶಿವಪ್ರಸಾದ್, ಅನಿಲ್, ಎಸ್.ಕೆ.ಮಾದು, ಸತೀಶ್, ಮಂಜುನಾಥ್ ಇದ್ದರು.
ಮದ್ದೂರು: ನಗರದ ಶಿವಪುರದ ಹಳೆ ಕೊಪ್ಪ ವೃತ್ತದಲ್ಲಿ ನಡೆದಾಡುವ ದೇವರು, ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ 119ನೇ ಜಯಂತ್ಯುತ್ಸವವನ್ನು ಬುಧವಾರ ಆಯೋಜಿಸಲಾಗಿತ್ತು.
ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿ, ನೆರೆದಿದ್ದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಗ್ರಾಮದ ಮುಖಂಡ ಭದ್ರಯ್ಯ ಮಾತನಾಡಿ, ತ್ರಿವಿಧ ದಾಸೋಹಿ, ನಡೆದಾಡುವ ದೇವರು ಎಂದು ಪ್ರಸಿದ್ಧರಾಗಿದ್ದ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರಸ್ವಾಮಿ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಮುಖಂಡರಾದ ಶಿವಕುಮಾರ್, ವಿಶ್ವನಾಥ್, ಶಿವಪ್ರಸಾದ್, ಅನಿಲ್, ಎಸ್.ಕೆ.ಮಾದು, ಸತೀಶ್, ಮಂಜುನಾಥ್ ಇದ್ದರು.