ಕಿಕ್ಕೇರಿಯ ಬ್ರಹ್ಮೇಶ್ವರ ದೇಗುಲ ಬೀದಿ ನಿವಾಸಿ ಜಗನ್ನಾಥ್ ಅವರ ಮನೆಯಲ್ಲಿ ಕಳವು ಆಗಿರುವುದನ್ನು ವೀಕ್ಷಿಸಲು ಸೇರಿರುವ ಜನ ಸಮೂಹ.
- ಬ್ರಹ್ಮೇಶ್ವರ ಬೀದಿ
- ದುಷ್ಕರ್ಮಿಗಳು ಮನೆಗೆ ನುಗ್ಗಿ
ಕಿಕ್ಕೇರಿ: ಇಲ್ಲಿನ ಬ್ರಹ್ಮೇಶ್ವರ ಬೀದಿಯಲ್ಲಿ ಮಂಗಳವಾರ ರಾತ್ರಿ ದುಷ್ಕರ್ಮಿಗಳು ಮನೆಗೆ ನುಗ್ಗಿ ಭಾರಿ ಪ್ರಮಾಣದಲ್ಲಿ ಹಣವನ್ನು ದೋಚಿ ಪರಾರಿಯಾಗಿದ್ದಾರೆ.
ಗ್ರಾಮದ ನಿವಾಸಿ ಜಗನ್ನಾಥ್ ಹಣ ಕಳೆದುಕೊಂಡವ. ಮಂದಗೆರೆ ರಸ್ತೆಯಲ್ಲಿರುವ ಜಗನ್ನಾಥ ಮಿಲಟರಿ ಹೋಟೆಲ್ ಮಾಲೀಕರಾದ ಜಗನಾಥ್ ಹೊಸದಾಗಿ ಮನೆ ಕಟ್ಟಿಸುತ್ತಿದ್ದರು. ಈ ಸಲುವಾಗಿ ಮನೆಯಲ್ಲಿ 10 ಲಕ್ಷ ರೂ. ನಗದು ಇಟ್ಟಿದ್ದರು ಎನ್ನಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ದುಷ್ಕರ್ಮಿಗಳು ಮನೆಯ ಮುಂಭಾಗದ ಬೀಗವನ್ನು ಒಡೆದು ಒಳ ಪ್ರವೇಶಿಸಿದ್ದಾರೆ. ಬಳಿಕ ಬೀರು ಬಾಗಿಲು ಬೀಗ ಒಡೆದು ಬೀರುವಿನಲ್ಲಿದ್ದ ಚಿನ್ನದ ಒಡವೆಯನ್ನು ಬಿಟ್ಟು ಹಣ ದೋಚಿ ಪರಾರಿಯಾಗಿದ್ದಾರೆ.
ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳದವರು ಆಗಮಿಸಿ ಪರಿಶೀಲನೆ ನಡೆಸಿದರು.