ಮಂಡ್ಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಮಾಡಲಾಯಿತು. 
ಮಂಡ್ಯ

ಬರವಣಿಗೆ ಸಮಾಜದಲ್ಲಿ ಬದಲಾವಣೆ ತರಲಿ: ಶರಣ ಸಾಹಿತ್ಯ ಪರಿಷತ್ ಮೈಸೂರು ಜಿಲ್ಲಾಧ್ಯಕ್ಷ ಜಯಪ್ಪ ಹೊನ್ನಾಳಿ ಸಲಹೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಕವಿ ಕೊ.ನಾ.ಪುರುಷೋತ್ತಮ ಅವರ ಐನೋರ್ ಮಗ ಕೃತಿ ಬಿಡುಗಡೆ
  • ಕನ್ನಿಕಾ ಶಿಲ್ಪಾ ನವೋದಯ ಎಜುಕೇಷನ್ ಟ್ರಸ್ಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ
  • ಶರಣ ಸಾಹಿತ್ಯ ಪರಿಷತ್ ಮೈಸೂರು ಜಿಲ್ಲಾಧ್ಯಕ್ಷ ಜಯಪ್ಪ ಹೊನ್ನಾಳಿ ಸೇರಿದಂತೆ ಹಲವು ಗಣ್ಯರು ಭಾಗಿ
ಮಂಡ್ಯ: ಕವಿಯ ಬರವಣಿಗೆ ಸಮಾಜದಲ್ಲಿ ಬದಲಾವಣೆ ತರುವ ಸನ್ನಿವೇಶಗಳನ್ನು ಹುಟ್ಟು ಹಾಕುವಂತಿರಬೇಕು ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮೈಸೂರು ಜಿಲ್ಲಾಧ್ಯಕ್ಷ ಜಯಪ್ಪ ಹೊನ್ನಾಳಿ ಸಲಹೆ ನೀಡಿದರು.
ನಗರದ ಕನ್ನಿಕಾ ಶಿಲ್ಪಾ ನವೋದಯ ಎಜುಕೇಷನ್ ಟ್ರಸ್ಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಕವಿ ಕೊ.ನಾ.ಪುರುಷೋತ್ತಮ ಅವರ ಐನೋರ್ ಮಗ ಕೃತಿ ಬಿಡುಗಡೆ ಹಾಗೂ ಬದುಕು ಬರಹ ಅವಲೋಕನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಏಕಾಂತವನ್ನು ಸುಖಾಂತವಾಗಿ ಹಾಗೂ ಪ್ರಶಾಂತ ವಾತಾವರಣವಾಗಿ ಅಕ್ಷರ ರೂಪದಲ್ಲಿ ತರುವವನೇ ಉತ್ತಮ ಕವಿಯಾಗುತ್ತಾನೆ. ವಿಧಿಯನ್ನು ನಂಬುವವರು ಇದ್ದಾರೆ. ಅದನ್ನು ಐನೋರ್ ಮಗ ಕೃತಿಯಲ್ಲಿ ಅಚ್ಚುಕಟ್ಟಾಗಿ ಬಳಸಿಕೊಂಡಿರುವುದನ್ನು ಕವಿ ಬಳಸಿಕೊಂಡಿರುವುದು ಶ್ಲಾಘನೀಯ ಎಂದರು.
ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಜಿ.ವಿ.ನಾಗರಾಜು ಅವರು ಕವಿ ಕೊ.ನಾ.ಪುರುಸೋತ್ತಮ ರಚನೆಯ ಐನೋರ್ ಮಗ ಕೃತಿ ಬಿಡುಗಡೆ ಮಾಡಿದರು. ಟ್ರಸ್ಟ್ ಅಧ್ಯಕ್ಷೆ ಎಚ್.ಆರ್.ಕನ್ನಿಕಾ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ದ.ಕೋ.ಹಳ್ಳಿ ಚಂದ್ರಶೇಖರ್, ಪೂರ್ಣಿಮಾ ಪುರುಷೋತ್ತಮ, ಶಿಕ್ಷಕ ಕೊತ್ತತ್ತಿ ರಾಜು ಇದ್ದರು.