ಪಾಂಡವಪುರ ತಾಲೂಕಿನ ಅರಳಕುಪ್ಪೆ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ರೈತ ಸಂಘದ ನಾಯಕಿ ಸುನಿತಾ ಪುಟ್ಟಣ್ಣಯ್ಯ, ಡೇರಿ ಅಧ್ಯಕ್ಷ ಎ.ಜೆ.ಜಗದೀಶ್ ಭೂಮಿ ಪೂಜೆ ನೆರವೇರಿಸಿದರು. ಪಿ.ಕೆ.ಪದ್ಮಮ್ಮ, ಎಸ್.ಸೋಮೇಗೌಡ, ಎ.ಎಸ್.ಕೀರ್ತಿ ಹರ್ಷ, ನಾರಾಯಣ, ಎ.ಆರ್.ಕೆಂಪೂಗೌಡ, ಎ.ಆರ್.ಅಲೋಕ, ಕೆ.ನಾಗರಾಜು ಇತರರಿದ್ದರು. 
ಮಂಡ್ಯ

ಬಿಎಂಸಿ ಹೆಚ್ಚುವರಿ ಕಟ್ಟಡಕ್ಕೆ ಶಂಕು

ಅಭಿನಯ್ ಎಚ್.ಎಂ
ಪಾಂಡವಪುರ: ತಾಲೂಕಿನ ಅರಳಕುಪ್ಪೆ ಹಾಲು ಉತ್ಪಾದಕರ ಸಹಕಾರ ಸಂಘದ ಹೆಚ್ಚುವರಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ರೈತ ಸಂಘದ ನಾಯಕಿ ಸುನಿತಾ ಪುಟ್ಟಣ್ಣಯ್ಯ, ಡೇರಿ ಅಧ್ಯಕ್ಷ ಎ.ಜೆ.ಜಗದೀಶ್ ಭೂಮಿ ಪೂಜೆ ನೇರವೇರಿಸಿದರು.
ಜಗದೀಶ್ ಮಾತನಾಡಿ, ಅರಳಕುಪ್ಪೆ ಡೇರಿಯಲ್ಲಿ 3 ಸಾವಿರ ಸಾಮರ್ಥ್ಯದ ಬಿಎಂಸಿ ಘಟಕ ಇತ್ತು. ಡೇರಿಯಲ್ಲಿ 3 ಸಾವಿರ ಲೀಟರ್‌ಗೂ ಹೆಚ್ಚು ಹಾಲು ಪೂರೈಕೆಯಾದ ಹಿನ್ನೆಲೆಯಲ್ಲಿ 5 ಸಾವಿರ ಲೀಟರ್ ಸಾಮರ್ಥ್ಯ ಬಿಎಂಸಿ ಘಟಕ ನಿರ್ಮಾಣ ಮಾಡುವ ಉದ್ದೇಶದಿಂದ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. ಇದರಿಂದ ಸಂಘಕ್ಕೂ ಅಧಿಕ ಲಾಭ ಬರುವುದರ ಜತೆಗೆ ಸಂಘವು ಅಭಿವೃದ್ಧಿಯತ್ತ ಮುನ್ನಡೆಯಲು ಸಾಧ್ಯವಾಗಲಿದೆ ಎಂದರು.
ಇದೇ ವೇಳೆ ಸುನಿತಾ ಪುಟ್ಟಣ್ಣಯ್ಯ, ಮನ್‌ಮುಲ್ ಉಪವ್ಯವಸ್ಥಾಪಕ ಆರ್.ಪ್ರಸಾದ್, ನಾಗೇಂದ್ರ ಅವರಿಗೆ ಸಂಘದ ವತಿಯಿಂದ ಅಭಿನಂದಿಸಲಾಯಿತು.
ಡೇರಿ ಉಪಾಧ್ಯಕ್ಷೆ ಪಿ.ಕೆ.ಪದ್ಮಮ್ಮ, ನಿರ್ದೇಶಕರಾದ ಎಸ್.ಸೋಮೇಗೌಡ, ಎ.ಎಸ್.ಕೀರ್ತಿ ಹರ್ಷ, ನಾರಾಯಣ, ಎ.ಆರ್.ಕೆಂಪೂಗೌಡ, ಎ.ಆರ್.ಅಲೋಕ, ಕೆ.ನಾಗರಾಜು, ಆರತಿ, ಡಿ.ಜಯರಾಮು, ಚಿಕ್ಕಯ್ಯ, ಡೇರಿ ಕಾರ್ಯದರ್ಶಿ ಕೆ.ಜಯದೇವ್, ಎಸ್.ಮಹೇಂದ್ರ, ರವಿಕುಮಾರ್, ರತ್ನಾ, ಲತಾ ಸೇರಿದಂತೆ ಮುಖಂಡರು ಹಾಜರಿದ್ದರು.