ಸಮಾರೋಪ ಸಮಾರಂಭ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಅಭಿನಂದಿಸಲಾಯಿತು. ದಿವ್ಯಾ ರಾಮಚಂದ್ರ ಶೆಟ್ಟಿ, ನಾಡಗೌಡ್ರು, ಸುರೇಶ್, ಶಿವಲಿಂಗೇಗೌಡರು, ಬಿ.ರಾಜೇಅರಸ್, ಬಿ.ಕೆ.ಸುರೇಶ್, ಡಾ.ಎಂ.ಸಿ.ಸತೀಶ್‌ಬಾಬು, ನಂಜುಂಡಸ್ವಾಮಿ ಇದ್ದರು. 
ಮಂಡ್ಯ

ರಕ್ತದಾನಿಗಳು, ರಾಜ್ಯ ಪ್ರಶಸ್ತಿ ವಿಜೇತರಿಗೆ ಗೌರವ

ಮದ್ದೂರು: ತಾಲೂಕಿನ ಕೆ.ಹೊನ್ನಲಗೆರೆ ಆರ್.ಕೆ.ಪ್ರಥಮ ದರ್ಜೆ ಕಾಲೇಜಿನ 2025 -26ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಏ.26ರಿಂದ ಮೇ 2ವರರೆಗೆ ಬನ್ನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶಿಬಿರದಲ್ಲಿ ಐದು ದಿನಗಳ ಕಾಲ ಗ್ರಾಮದಲ್ಲಿ ಶಿಬಿರಾರ್ಥಿಗಳಿಂದ ಶ್ರಮದಾನ, ಸ್ವಚ್ಛತೆ, ನೈರ್ಮಲ್ಯ, ಅಗ್ನಿಶಾಮಕ ದಳದವರಿಂದ ಸಾರ್ವಜನಿಕರಿಗೆ ಕಲ್ಪಿತ ಪ್ರದರ್ಶನ, ಕಣ್ಣಿನ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಜಾನುವಾರುಗಳಿಗೆ ಲಸಿಕೆ ಕಾರ್ಯಕ್ರಮ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ಶಿಬಿರಾರ್ಥಿಗಗಳು ಮತ್ತು ಗ್ರಾಮಸ್ಥರಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಸಮಾರೋಪ ಸಮಾರಂಭದಲ್ಲಿ ನಿವೃತ್ತ ವೀರ ಯೋಧರಿಗೆ, ಸಮಾಜ ಸೇವಕರಿಗೆ, ಅತಿ ಹೆಚ್ಚು ರಕ್ತದಾನಿಗಳಿಗೆ ಮತ್ತು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ರಾಜ್ಯ ಪ್ರಶಸ್ತಿ ವಿಜೇತರಿಗೆ ಗೌರವ ಸಮರ್ಪಣೆ ನೀಡಲಾಯಿತು.
ಮುಖಂಡರಾದ ದಿವ್ಯಾ ರಾಮಚಂದ್ರ ಶೆಟ್ಟಿ, ನಾಡಗೌಡ್ರು, ಸುರೇಶ್, ಶಿವಲಿಂಗೇಗೌಡರು, ಬಿ.ರಾಜೇಅರಸ್, ಬಿ.ಕೆ.ಸುರೇಶ್, ಪ್ರಾಂಶುಪಾಲ ಡಾ.ಎಂ.ಸಿ.ಸತೀಶ್‌ಬಾಬು, ಶಿಬಿರದ ಕಾರ್ಯಕ್ರಮಾಧಿಕಾರಿ ನಂಜುಂಡಸ್ವಾಮಿ, ಸಹ ಶಿಬಿರಾಧಿಕಾರಿಗಳಾದ ಚೇತನ್ ಕುಮಾರ್, ಶಶಿಕಲಾ, ಮಂಜುನಾಥ್ ಶೈಕ್ಷಣಿಕ ಪಾಲುದಾರರು, ಅಧ್ಯಾಪಕರು, ಅಧ್ಯಾಪಕೇತರರು ಹಾಗೂ ಬನ್ನಹಳ್ಳಿ ಗ್ರಾಮಸ್ಥರು ಭಾಗವಹಿಸಿ ಸಮಾರಂಭ ಯಶಸ್ವಿಗೊಳಿಸಿದರು.