ಮಂಡ್ಯ ನಗರದ ಗಾಂಧಿಭವನದಲ್ಲಿ ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ರಕ್ತದಾನ ಶಿಬಿರದ ಫೋಸ್ಟರ್ ಬಿಡುಗಡೆ ಮಾಡಿದರು. 
ಮಂಡ್ಯ

ಜೂ.5ರಂದು ಮದ್ದೂರಿನಲ್ಲಿ ರಕ್ತದಾನ ಶಿಬಿರ: ಫೋಸ್ಟರ್ ಬಿಡುಗಡೆ ಮಾಡಿದ ನಿಶ್ಚಲಾನಂದನಾಥ ಸ್ವಾಮೀಜಿ

ಪ್ರಮುಖ ಮುಖ್ಯಾಂಶಗಳು

  • ಟೀಮ್ ನಾಲ್ವಡಿ ಸಂಸ್ಥೆಯಿಂದ ಆಯೋಜನೆ
  • ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಚರಣೆ
ಮಂಡ್ಯ: ಮದ್ದೂರು ನಗರದಲ್ಲಿ ಟೀಮ್ ನಾಲ್ವಡಿ ಸಂಸ್ಥೆಯಿಂದ ಜೂ.5ರಂದು ಆಯೋಜಿಸಿರುವ ಬೃಹತ್ ರಕ್ತದಾನ ಶಿಬಿರದ ಫೋಸ್ಟರನ್ನು ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಮಂಡ್ಯದಲ್ಲಿ ಬಿಡುಗಡೆ ಮಾಡಿದರು.
ನಗರದ ಗಾಂಧಿಭವನದಲ್ಲಿ ಫೋಸ್ಟರ್‌ನ್ನು ಬಿಡುಗಡೆ ಮಾಡಿದ ನಿಶ್ಚಲಾನಂದನಾಥ ಸ್ವಾಮೀಜಿ ಅವರು, ಟೀಮ್ ನಾಲ್ವಡಿ ಸಂಸ್ಥೆಯ ಸೇವಾ ಕಾರ್ಯವನ್ನು ಶ್ಲಾಘಿಸಿದರು. ಪ್ರಸ್ತುತ ರಕ್ತದ ಕೊರತೆ ಎದುರಾಗಿರುವ ಹಿನ್ನಲೆಯಲ್ಲಿ ಹತ್ತಾರು ಸಂಘಟನೆಗಳ ಮತ್ತು ರಕ್ತದಾನಿಗಳ ಜತೆಗೂಡಿ ಈ ಶಿಬಿರ ಆಯೋಜಿಸಿದೆ. ದಾನಿಗಳು ಸ್ವಯಂ ಪ್ರೇರಿತರಾಗಿ ಬಂದು ರಕ್ತದಾನ ಮಾಡಬೇಕೆಂದು ಕೋರಿದರು.
ಅಂದು ಬೆಳಗ್ಗೆ 9 ಗಂಟೆಗೆ ಮದ್ದೂರಿನ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಶಿಬಿರ ನಡೆಯಲಿದೆ. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಾಗೂ ಜಗಜ್ಯೋತಿ ಬಸವಣ್ಣ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ರಾಷ್ಟ್ರಕವಿ ಕುವೆಂಪು, ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ ಗೌರವಾರ್ಥ ಈ ಶಿಬಿರ ಸಂಘಟಿಸಲಾಗಿದೆ ಎಂದು ಹೇಳಿದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ತಿಮ್ಮೇಗೌಡ, ವಕೀಲ ವಿಶಾಲ್‌ರಘು, ಅಂತಾರಾಷ್ಟ್ರೀಯ ಅಲಯನ್ಸ್‌ನ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು, ಕೆಎಸ್‌ಒಯು ಡಾ.ವೆಂಕಟೇಗೌಡ, ಹಾಪ್‌ಕಾಮ್ಸ್ ಮಾಜಿ ನಿರ್ದೇಶಕ ಹೊಸಹಳ್ಳಿ ನಾಗೇಶ್, ಎನ್‌ವೈಕೆ ನಿವೃತ್ತ ಲೆಕ್ಕಾಧಿಕಾರಿ ಎಚ್.ಎಂ.ಬಸವರಾಜು, ಟೀಮ್ ನಾಲ್ವಡಿ ಸಂಸ್ಥೆಯ ಮಹೇಶ್‌ಕುಮಾರ್, ಕೃಷ್ಣ ಇತರರಿದ್ದರು.
ಇದಕ್ಕೂ ಮೊದಲು ನಗರದ ಜಿಲ್ಲಾ ಭವನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಅವರು ಶಿಬಿರದ ಫೋಸ್ಟರನ್ನು ಬಿಡುಗಡೆ ಮಾಡಿದರು. ಮಳವಳ್ಳಿ ಡಿವೈಎಸ್‌ಪಿ ಯಶ್ವಂತ್‌ಕುಮಾರ್ ಇತರರಿದ್ದರು.