ದರ್ಶನ್ 
ಮಂಡ್ಯ

ಬೈಕ್ ನಿಯಂತ್ರಣ ತಪ್ಪಿ ಸವಾರ ಸಾವು

ಕಿಕ್ಕೇರಿ: ಹೋಬಳಿಯ ರಾಮನಹಳ್ಳಿ ತಿರುವಿನ ಬಳಿ ನಿಯಂತ್ರಣ ತಪ್ಪಿದ ಬೈಕ್ ತಂತಿಬೇಲಿಗೆ ನುಗ್ಗಿದ ಪರಿಣಾಮ ಸವಾರ ಮೃತಪಟ್ಟಿದ್ದಾರೆ.
ಸಮೀಪದ ವಡ್ಡರಹಳ್ಳಿ ಗ್ರಾಮದ ದರ್ಶನ್(25) ಮೃತ ಯುವಕ. ಕಾರ್ಯನಿಮಿತ್ತ ಕಿಕ್ಕೇರಿಗೆ ತೆರಳಿದ್ದ ಇವರು ಶನಿವಾರ ರಾತ್ರಿ ಸ್ವಗ್ರಾಮ ವಡ್ಡರಹಳ್ಳಿಗೆ ಬರುವಾಗಿ ರಾಮನಹಳ್ಳಿ ತಿರುವಿನ ಬಳಿ ಬೈಕ್ ನಿಯಂತ್ರಣ ತಪ್ಪಿ ರಸ್ತೆಬದಿಯ ಜಮೀನಿನೊಂದರ ತಂತಿಬೇಲಿಗೆ ನುಗ್ಗಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡು ದರ್ಶನ್ ಸ್ಥಳದಲ್ಲಿಯೇ ಮೃತರಾದರು.
ಸ್ಥಳಕ್ಕೆ ಕಿಕ್ಕೇರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡರು. ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಮೃತದೇಹ ಒಪ್ಪಿಸಲಾಯಿತು.