ಎಸ್ಸೆಸ್ಸೆಲ್ಸಿ-2 ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಪೂಣಪ್ರಜ್ಞ ಶಾಲೆಯ ವಿದ್ಯಾರ್ಥಿ ಭುವನ್‌ಎಸ್.ಗೌಡ ಅವರನ್ನು ಅಭಿನಂದಿಸಲಾಯಿತು. ಧನಂಜಯ, ಕಸ್ತೂರಿ ಅನಂತೇಗೌಡ, ಎಚ್.ಅರ್.ಅನಂತೇಗೌಡ, ಬಿ.ಕೃಷ್ಣ, ದೇವರಾಜು, ರಾಮು ಇದ್ದರು.
- ಎಸ್ಸೆಸ್ಸೆಲ್ಸಿ-2 ಪರೀಕ್ಷೆಯಲ್ಲಿ ಹೆಚ್ಚು ಅಂಕ
ಮದ್ದೂರು: ನಗರದ ಶಿವಪುರದ ಪೂರ್ಣಪ್ರಜ್ಞ ಕಾನ್ವೆಂಟ್ ವಿದ್ಯಾರ್ಥಿ ಭುವನ್.ಎಸ್.ಗೌಡ 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ-2 ಪರೀಕ್ಷೆಯಲ್ಲಿ 623 ಶೇ.(99.68) ಅಂಕ ಪಡೆದು ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದು ಗಮನ ಸೆಳೆದಿದ್ದಾನೆ.
ಟಿ.ಜಿ.ಪ್ರೀತಮ್ 614 (98.24), ಮೌಲ್ಯಶ್ರೀ 613 (98.08), ಮೌಲ್ಯ 611 (97.76), ಕವನಾ.ಎಸ್.ಗೌಡ 610 (97.60), ಎಸ್.ಪಿ.ಚಂದನಾ 607(97.12), ಕೆ.ಎಂ.ಪೂರ್ವಿಕಾ 604 (96.64), ಆರ್.ಪೂರ್ವಿಕಾ 603 (96.48), ಎನ್.ಗಗನ್ ದೀಪ್ 599 (95.84) ಅಂಕಗಳನ್ನು ಪಡೆದಿದ್ದಾರೆ.
ಪರೀಕ್ಷೆಗೆ ಹಾಜರಾದ ಒಟ್ಟು 164 ವಿದ್ಯಾರ್ಥಿಗಳಲ್ಲಿ 55 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 78 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 31 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡು ಶಾಲೆಗೆ ಮತ್ತು ಪಾಲಕರಿಗೆ ಕೀರ್ತಿ ತಂದಿದ್ದರೆ ಎಂದು ಸಂಸ್ಥೆಯ ಅಧ್ಯಕ್ಷೆ ಕಸ್ತೂರಿ ಅನಂತೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯಕ್ಕೆ ಮೂರನೇ ಸ್ಥಾನ ಪಡೆದ ಭುವನ್‌ಎಸ್.ಗೌಡ ಅವರನ್ನು ಅಭಿನಂದಿಸಿ ಮಾತನಾಡಿದ ಬಿಇಒ ಧನಂಜಯ, ಪೂರ್ಣಪ್ರಜ್ಞ ವಿದ್ಯಾಸಂಸ್ಥೆ ನುರಿತ ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ಕೊಡಿಸುತ್ತಿರುವುದರಿಂದ ಪ್ರತಿ ವರ್ಷ ಉತ್ತಮ ಫಲಿತಾಂಶ ಬರುತ್ತಿದೆ. ಇದಕ್ಕೆ ಸಂಸ್ಥೆಯ ಅಧ್ಯಕ್ಷೆ ಕಸ್ತೂರಿ ಅನಂತೇಗೌಡ, ಮುಖ್ಯ ಶಿಕ್ಷಕ ಎಚ್.ಆರ್.ಅನಂತೇಗೌಡ ಅವರ ಶ್ರಮ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪೂರ್ಣಪ್ರಜ್ಞಾ ವಿದ್ಯಾಸಂಸ್ಥೆಯ ಅಧ್ಯಕ್ಷೆ ಕಸ್ತೂರಿ ಅನಂತೇಗೌಡ, ಮುಖ್ಯ ಶಿಕ್ಷಕ ಎಚ್.ಆರ್.ಅನಂತೇಗೌಡ, ನಿವೃತ್ತ ಪ್ರಾಂಶುಪಾಲ ಪ್ರೊ.ಬಿ.ಕೃಷ್ಣ, ಪಾಲಕರಾದ ದೇವರಾಜು, ರಾಮು ಇದ್ದರು.