ಬೆಳಗೊಳ ಗ್ರಾಪಂ ವ್ಯಾಪ್ತಿಯ ಹೊಸ ಆನಂದೂರು ಹಾಗೂ ಬೆಳಗೊಳ ಗ್ರಾಮಗಳಲ್ಲಿ ಬಹುಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ರಮೇಶ್ ಬಂಡಿಸಿದ್ದೇಗೌಡ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು. 
ಮಂಡ್ಯ

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ

ಎಂ.ರವಿ
ಕೆ.ಆರ್.ಸಾಗರ: ಬೆಳಗೊಳ ಗ್ರಾ.ಪಂ ವ್ಯಾಪ್ತಿಯ ಹೊಸ ಆನಂದೂರು ಹಾಗೂ ಬೆಳಗೊಳ ಗ್ರಾಮಗಳಲ್ಲಿ ಬಹುಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ರಮೇಶ್ ಬಂಡಿಸಿದ್ದೇಗೌಡ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.
ಗ್ರಾಮಸ್ಥರು, ಅಧಿಕಾರಿಗಳು, ಜನಪ್ರತಿನಿಧಿಗಳ ಸಮ್ಮುಖದಲ್ಲಿ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಶಾಸಕರು, ಕ್ಷೇತ್ರದ ಪ್ರತಿ ಗ್ರಾಮಗಳ ಅಭಿವೃದ್ಧಿಗೂ ಸರ್ಕಾರ ಹಣ ಬಿಡುಗಡೆ ಮಾಡುತ್ತಿದೆ. ಹಂತ ಹಂತವಾಗಿ ಎಲ್ಲ ಗ್ರಾಮಗಳ ಪ್ರಮುಖ ಸಮಸ್ಯೆಗಳ ನಿವಾರಣೆಗೆ ಮುಂದಾಗುವುದಾಗಿ ತಿಳಿಸಿದರು.
34 ಕೊಟಿ ರೂ. ವೆಚ್ಚದಲ್ಲಿ ಹೊಸ ಆನಂದೂರು ಮತ್ತು ಬೆಳಗೊಳ ಗ್ರಾಮದಲ್ಲಿ ಕಾವೇರಿ ಬಲದಂಡೆ ಯೋಜನೆಯಡಿ ಬರುವ 28 ಗ್ರಾಮಗಳ ಕುಡಿಯುವ ನೀರು ಸರಬರಾಜು ಕಾಮಗಾರಿ, 2.5 ಕೋಟಿ ರೂ.ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ, 1.4 ಕೋಟಿ ರೂ. ವೆಚ್ಚದಲ್ಲಿ ಪ್ರಯಾಣಿಕರ ಬಸ್ ತಂಗುದಾಣ ಬರಲಿದೆ ಎಂದು ವಿವರಿಸಿದರು.
ತಹಸೀಲ್ದಾರ್ ಚೇತನ ಯಾದವ್, ಬೆಳಗೊಳ ಗ್ರಾಮದ ಪಿಡಿಒ ಕುಳ್ಳೇಗೌಡ, ಪಿಎಲ್‌ಡಿ ಬ್ಯಾಂಕ್ ಸದಸ್ಯ ರವೀಶ್, ಬೆಳಗಳ ಗ್ರಾಪಂ ಮಾಜಿ ಅಧ್ಯಕ್ಷ ಸುರೇಶ್, ಸದಸ್ಯರಾದ ಸರಿತಾ ರವಿಕುಮಾರ್, ರವಿಕುಮಾರ್, ಪುಟ್ಟರಾಜು, ನಂಜಪ್ಪ, ಬೆಳಗೊಳ ಸೊಸೈಟಿ ಅಧ್ಯಕ್ಷೆ ಸುಪ್ರಿಯಾ ರವಿಕುಮಾರ್, ಗ್ರಾಮದ ಮುಖಂಡರಾದ ಸ್ವಾಮಿಗೌಡ, ಅರವಿಂದ್, ಜಗದೀಶ್ ಇತರರು ಇದ್ದರು.