ಕಿಕ್ಕೇರಿ ಸಮೀಪದ ಮಾಕವಳ್ಳಿ ಗ್ರಾಪಂ ಅಧ್ಯಕ್ಷರಾಗಿ ಕುಂದನಹಳ್ಳಿ ಭೈರಯ್ಯ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು. ಮಂಜೇಗೌಡ, ಮಂಜುನಾಥ, ಯೋಗೇಶ್, ಅನಿಲ್ ಮತ್ತಿತರರಿದ್ದರು.  
ಮಂಡ್ಯ

ಮಾಕವಳ್ಳಿ ಗ್ರಾಪಂ ಅಧ್ಯಕ್ಷರಾಗಿ ಭೈರಯ್ಯ ಆಯ್ಕೆ

ಕಿಕ್ಕೇರಿ: ಸಮೀಪದ ಮಾಕವಳ್ಳಿ ಗ್ರಾಪಂ ಅಧ್ಯಕ್ಷರಾಗಿ ಕುಂದನಹಳ್ಳಿ ಬೈರಯ್ಯ ಅವಿರೋಧವಾಗಿ ಆಯ್ಕೆಯಾದರು.
ಲಲಿತಮ್ಮ ಸಣ್ಣಯ್ಯ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣಾ ಪ್ರಕ್ರಿಯೆ ನಡೆಯಿತು. ಸದಸ್ಯ ಕುಂದನಹಳ್ಳಿ ಭೈರಯ್ಯ ಮಾತ್ರ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಕಾರಣ ಅವಿರೋಧವಾಗಿ ಆಯ್ಕೆಯಾದರು. ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಪಿಡಿಒ ಶೈಲಜಾ ಘೋಷಿಸಿದರು.
ನೂತನ ಅಧ್ಯಕ್ಷ ಭೈರಯ್ಯ ಮಾತನಾಡಿ, ತಮ್ಮ ಅವಧಿಯಲ್ಲಿ ಎಲ್ಲ ಸದಸ್ಯರನ್ನು ಒಗ್ಗೂಡಿಸಿಕೊಂಡು ಪಂಚಾಯಿತಿಯ ಎಲ್ಲ ಗ್ರಾಮಗಳ ಅಭಿವೃದ್ಧಿ, ಮೂಲ ಸೌಲಭ್ಯ ಪೂರೈಕೆ, ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲು ಶ್ರಮಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕರ್ತರು ನೂತನ ಅಧ್ಯಕ್ಷರಿಗೆ ಶುಭ ಕೋರಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜ್ಯೋತಿ, ಮಂಜೇಗೌಡ ಎಂ.ಆರ್. ಮಂಜೇಗೌಡ, ಕಾಯಿ ಮಂಜುನಾಥ, ಯೋಗೇಶ್, ಅನಿಲ್, ವರ ಪ್ರತಾಪ್, ಸುಜಾತಾ, ವಿ.ಡಿ.ಮಂಜುನಾಥ, ಲಲಿತಮ್ಮ, ಸವಿತಮ್ಮ, ಕುಮಾರ್, ಸಾಕಮ್ಮ, ವೀಣಾ, ಶೀಲಾ, ಜೆಡಿಎಸ್ ಮುಖಂಡರಾದ ಅಲೋಕ್, ಚಲುವರಾಜು, ಮಂಜು, ವೆಂಕಟೇಶ್, ನಂಜಯ್ಯ ಮತ್ತಿತರರಿದ್ದರು.