ಮದ್ದೂರು ತಾಲೂಕಿನ ಆತಗೂರು ಹೋಬಳಿಯ ಚಿಕ್ಕಂಕನಹಳ್ಳಿಯ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ನಂದಿ ಬಸವೇಶ್ವರ ಸ್ವಾಮಿ ಭಾರಿ ದನಗಳ ಜಾತ್ರೆ ಮುಕ್ತಾಯವಾದ ಹಿನ್ನೆಲೆಯಲ್ಲಿ ಸ್ವಾಮಿಗೆ ಶನಿವಾರ ಪುಣ್ಯ ಮಜ್ಜನ ಸ್ನಾನ ಮಾಡಲಾಯಿತು. ಜೆ.ಎಂ.ಕಲ್ಲೇಶ್‌ಕುಮಾರ್ ಇದ್ದರು. 
ಮಂಡ್ಯ

ನಂದಿ ಬಸವೇಶ್ವರಸ್ವಾಮಿಗೆ ಪುಣ್ಯ ಮಜ್ಜನ ಸ್ನಾನ

ಮದ್ದೂರು: ತಾಲೂಕಿನ ಆತಗೂರು ಹೋಬಳಿಯ ಚಿಕ್ಕಂಕನಹಳ್ಳಿಯ ಇತಿಹಾಸ ಪ್ರಸಿದ್ಧ ಶ್ರೀ ನಂದಿ ಬಸವೇಶ್ವರಸ್ವಾಮಿ ಭಾರಿ ದನಗಳ ಜಾತ್ರೆ ಮುಕ್ತಾಯವಾದ ಹಿನ್ನೆಲೆಯಲ್ಲಿ ಸ್ವಾಮಿಗೆ ಶನಿವಾರ ಪುಣ್ಯ ಮಜ್ಜನ ಸ್ನಾನ ಮಾಡಲಾಯಿತು.
ದೇಗುಲದ ಪ್ರಧಾನ ಅರ್ಚಕ ಜೆ.ಎಂ.ಕಲ್ಲೇಶ್‌ಕುಮಾರ್ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಜಾತ್ರೆಗೆ ರಾಸುಗಳು ಆಗಮಿಸಿದ್ದು ವಿಶೇಷವಾಗಿತ್ತು. ದನಗಳ ಜಾತ್ರೆ ಮುಗಿದ ಹಿನ್ನೆಲೆಯಲ್ಲಿ ಸಂಪ್ರದಾಯದಂತೆ ದೇಗುಲದಲ್ಲಿ ಪುಣ್ಯ ಮಜ್ಜನ ಸ್ನಾನ ಮಾಡಲಾಯಿತು ಎಂದರು.
ದೇಗುಲದಲ್ಲಿ ಪುಣ್ಯ ಮಜ್ಜನ ಅಂಗವಾಗಿ ರುದ್ರಾಭಿಷೇಕ, ಮಹಾ ಮಂಗಳಾರತಿ ಸೇರಿದಂತೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು. ಜತೆಗೆ ನೂರಾರು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.