ಮಂಡ್ಯ ನಗರದ ಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘದಲ್ಲಿ ಬಸವಣ್ಣನ ಜಯಂತಿ ಆಚರಿಸಲಾಯಿತು. 
ಮಂಡ್ಯ

ಬಸವಣ್ಣನ ಆಶಯದಂತೆ ಸಜ್ಜನರಾಗಿ ಬದುಕೋಣ: ಸಹಕಾರಿ ಸಂಘದ ಅಧ್ಯಕ್ಷ ಎಸ್.ನಾಗರಾಜು ಅಭಿಮತ

ಮಂಡ್ಯ: ವಿಶ್ವಗುರು ಬಸವಣ್ಣನ ಆಶಯದಂತೆ ಎಲ್ಲರೂ ಸಜ್ಜನರಾಗಿ ಮಾದರಿಯಾಗಿ ಬದುಕಬೇಕು ಎಂದು ಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಜಿಲ್ಲಾಧ್ಯಕ್ಷ ಎಸ್.ನಾಗರಾಜು ಕರೆ ನೀಡಿದರು.
ನಗರದ ವಿ.ವಿ ರಸ್ತೆಯಲ್ಲಿರುವ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಜಗಜ್ಯೋತಿ ಬಸವೇಶ್ವರರ 893ನೇ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಮಹಾನ್ ಮಾನವತಾವಾದಿ ಬಸವಣ್ಣ ತಮ್ಮ ತತ್ವ, ಆದರ್ಶದ ಮೂಲಕವೇ ವಿಶ್ವಗುರುವಾಗಿದ್ದಾರೆ. ಮಾತ್ರವಲ್ಲದೆ ವಿಶ್ವದಾದ್ಯಂತ ಅವರನ್ನು ಪೂಜಿಸುತ್ತಾರೆ. ಅದೇ ರೀತಿ ಪ್ರತಿಯೊಬ್ಬರು ನ್ಯಾಯಯುತವಾಗಿ ಬದುಕಬೇಕು ಎನ್ನುವ ಅವರ ಮಾತನ್ನು ಪಾಲಿಸೋಣ ಎಂದರು.
ಸಂಘದ ಉಪಾಧ್ಯಕ್ಷ ಡಿ.ದ್ಯಾವಣ್ಣ, ಶಿವಕುಮಾರ್, ಮಹದೇವಸ್ವಾಮಿ, ಲಿಂಗದೇವರು, ಮಹದೇವಪ್ಪ, ಪುಟ್ಟಬುದ್ದಿ, ಹೊನ್ನಮ್ಮ, ಶಂಕುತಲಾ ಇತರರಿದ್ದರು. ಇದೇ ವೇಳೆ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಸಲ್ಲಿಸಲಾಯಿತು. ಸಾರ್ವಜನಿಕರಿಗೆ ಪಾನಕ, ಮಜ್ಜಿಗೆ, ಪ್ರಸಾದವನ್ನು ವಿನಿಯೋಗಿಸಲಾಯಿತು.