ಜವಾದ್ ಆಲಂ 
ಮಂಡ್ಯ

ಮಾರಾಕಾಸ್ತ್ರಗಳಿಂದ ಬರ್ಬರ ಹತ್ಯೆ

ಲೋಕೇಶ್ ಮನು. ಡಿ
ಶ್ರೀರಂಗಪಟ್ಟಣ: ವಾರಾಕಾಸ್ತ್ರಗಳಿಂದ ಮುಸ್ಲಿಂ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಚ್ಚಿ ಕೊಲೆಗೈದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದ ವಿರಿಜಾ ನಾಲೆ ಸಮೀಪದಲ್ಲಿ ಶವ ಬುಧವಾರ ಪತ್ತೆಯಾಗಿದ್ದು, ಮೈಸೂರಿನ ಲೇ.ಅಹಮ್ಮದ್ ಅಬ್ಬಾಸ್ ಜಾವೀದ್ ಅವರ ಪುತ್ರ ಮೊಹಮದ್ ಸಾಹಿಲ್ ಆಲಂ ಅಲಿಯಾಸ್ ಜವಾದ್ ಆಲಂ(45) ಎಂದು ಗುರುತಿಸಲಾಗಿದೆ.
ಈತ ಇಂಜಿನಿಯರಿಂಗ್ ವಾಡಿ ಬಳಿಕ ಹಲವು ಕ್ರೈಂ ಕತ್ಯಗಳಲ್ಲಿ ಭಾಗಿಯಾಗಿದ್ದು, ಮೈಸೂರಿನ ಮಂಡಿ, ವಿ.ವಿ.ಪುರಂ, ಎನ್‌ಆರ್, ದೇವರಾಜ ಸೇರಿದಂತೆ ವಿವಿಧ ಠಾಣೆಗಳಲ್ಲಿ ವಿವಿಧ ಪ್ರಕರಣ ದಾಖಲಾಗಿದ್ದು, ಸಿಸಿಬಿ ಪೊಲೀಸರಿಗೆ ಬೇಕಾಗಿದ್ದ ಎಂಬುದು ತಿಳಿದುಬಂದಿದೆ.
ಸ್ಥಳಕ್ಕೆ ಬುಧವಾರ ಶ್ರೀರಂಗಪಟ್ಟಣ ಗ್ರಾವಾಂತರ ಠಾಣೆೆ ಇನ್ ಸ್ಪೆಕ್ಟರ್ ಆನಂದ್ ಕುವಾರ್ ಭೇಟಿ ನೀಡಿ ಪರಿಶೀಲಿಸಿದರು. ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭರಾಣಿ, ಡಿವೈಎಸ್ಪಿ ಕಷ್ಣಕುವಾರ್ ಸೇರಿದಂತೆ ಶ್ವಾನದಳ, ವಿಧಿ ವಿಜ್ಞಾನ ತಂಡ ತೆರಳಿ ಮಾಹಿತಿ ಪಡೆಯಿತು. ಶ್ರೀರಂಗಪಟ್ಟಣ ಗ್ರಾವಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.