ಮಂಡ್ಯ ನೆಹರುನಗರದಲ್ಲಿರುವ ಡ್ಯಾಫೋಡಿಲ್ಸ್ ಶಾಲೆಯಲ್ಲಿ ಪರಿಸರ ದಿನವನ್ನು ಆಚರಣೆ ಮಾಡಲಾಯಿತು.  
ಮಂಡ್ಯ

ಪ್ರಕೃತಿ ನಮ್ಮೆಲ್ಲರನ್ನೂ ಸಲಹುವ ತಾಯಿ: ಕೃಷಿಕ ಅಲಯನ್ಸ್ ಸಂಸ್ಥೆ ಕಾರ್ಯದರ್ಶಿ ಪ್ರೊ.ಡೇವಿಡ್ ಅಭಿಮತ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಡ್ಯಾಫೋಡಿಲ್ಸ್ ಶಾಲೆಯಲ್ಲಿ ಜಾಗೃತಿ ಅಭಿಯಾನ
  • ಪ್ರತಿಭಾಂಜಲಿ ಅಲಯನ್ಸ್ ಸಂಸ್ಥೆ ಸಹಯೋಗದಲ್ಲಿ ಆಯೋಜನೆ
ಮಂಡ್ಯ: ಪ್ರಕೃತಿ ಮಾತೆ ನಮ್ಮೆಲ್ಲರನ್ನೂ ಸಲಹುವ ದೈವಿಕತಾಯಿ ಎಂದು ಕೃಷಿಕ ಅಲಯನ್ಸ್ ಸಂಸ್ಥೆ ಕಾರ್ಯದರ್ಶಿ ಪ್ರೊ.ಡೇವಿಡ್ ಪ್ರತಿಭಾಂಜಲಿ ಹೇಳಿದರು.
ಇಲ್ಲಿನ ನೆಹರುನಗರದಲ್ಲಿರುವ ಡ್ಯಾಫೋಡಿಲ್ಸ್ ಶಾಲೆಯಲ್ಲಿ ಪ್ರತಿಭಾಂಜಲಿ ಅಲಯನ್ಸ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕುರಿತ ಜಾಗೃತಿ ಅಭಿಯಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೃಕ್ಷೋ ರಕ್ಷತಿ ರಕ್ಷಿತಃ ಎಂಬ ಘೊಷವಾಕ್ಯವನ್ನು ವಿದ್ಯಾರ್ಥಿ ದಿಸೆಯಲ್ಲಿಯೇ ಮೈಗೂಡಿಸಿಕೊಳ್ಳಬೇಕು. ಪ್ರಕೃತಿ ಮಾತೆ ನಮ್ಮೆಲ್ಲರನ್ನೂ ಸಲಹುವ ದೈವಿಕತಾಯಿ. ಪ್ರತಿವರ್ಷ ಪರಿಸರ ದಿನಾಚರಣೆ ಬರುತ್ತದೆ. ಆದರೆ ನಮಗೆ ನಿತ್ಯವೂ ಪರಿಸರ ದಿನವಾಗಬೇಕು. ಪರಿಸರ ಅಸಮತೋಲನದಿಂದ ಹವಾಮಾನ ಬದಲಾವಣೆಗೊಂಡು ಜಾಗತಿಕ ತಾಪಮಾನ ಹೆಚ್ಚಳವಾಗುತ್ತಿದೆ. ಭೂಕಂಪ, ಚಂಡಮಾರುತ, ಸುನಾಮಿ, ಅಕಾಲಿಕ ಮಳೆ, ಶುದ್ಧ ಆಮ್ಲಜನಕ ಕೊರತೆ ಎದುರಿಸುತ್ತಿದ್ದೇವೆ ಎಂದು ಎಚ್ಚರಿಸಿದರು.
ಡ್ಯಾಫೋಡಿಲ್ಸ್ ಶಾಲೆಯ ಕಾರ್ಯದರ್ಶಿ ಸುಜಾತಾಕೃಷ್ಣ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದೆ. ಪರಿಣಾಮ ತಾಪಮಾನ ವೃದ್ಧಿ ಮತ್ತು ಪರಿಸರ ನಾಶಕ್ಕೆ ಕಾರಣವಾಗುತ್ತಿದೆ. ವಿದ್ಯಾರ್ಥಿಗಳು ಬಟ್ಟೆ ಬ್ಯಾಗ್‌ಗಳನ್ನು ಬಳಕೆ ಮಾಡಿ. ಮನೆಗಳಲ್ಲಿ ಮತ್ತು ನಾಗರಿಕರಿಗೆ ಜಾಗೃತಿ ಮೂಡಿಸಿ. ಈ ವರ್ಷದ ಘೋಷವಾಕ್ಯ ಪ್ರಕೃತಿಯಿಂದ ಪ್ರೇರಿತರಾಗಿ, ಹವಾಮಾನಕ್ಕಾಗಿ, ನಮ್ಮ ಭವಿಷ್ಯಕ್ಕಾಗಿ ಎಂಬುದಾಗಿದೆ. ಪ್ರಕೃತಿಯಿಂದ ತಾಳ್ಮೆ, ಸಹಬಾಳ್ವೆ ಕಲಿಯೋಣ ಹಾಗೂ ಉತ್ತಮ ಹವಾಮಾನಕ್ಕಾಗಿ ಮನೆಗೊಂದು ಮರ ನೆಟ್ಟು ಬೆಳೆಸಿ, ಪೋಷಿಸಿ, ನಾಳೆಗಾಗಿ ಇಂದೇ ಪರಿಸರವನ್ನು ಉಳಿಸಿ ಬೆಳೆಸಿ ಎಂದು ಹೇಳಿದರು.
ಸಾಹಿತಿ ಡಾ.ಪ್ರದೀಪಕುಮಾರ ಹೆಬ್ರಿ, ಉಪನ್ಯಾಸಕಿ ಭಾರ್ಗವಿ, ಮುಖ್ಯಶಿಕ್ಷಕಿ ನಯನಾ ಇತರರಿದ್ದರು. ಇದೇ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ನೀಡಿ, ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪರಿಸರ ಉಳಿವು ಮತ್ತು ರಕ್ಷಣೆಗಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.